ನನ್ನವಳು
ಬೆಳದಿಂಗಳ ಬೆಳಕಿನಲಿ
ಚೆಲುವೊಂದ ಕಂಡೆ
ನಸುನಗುವ ಮುದ್ದಾದ
ನಕ್ಷತ್ರದ ಗೂಡಲ್ಲಿ
ಹೊಳೆಯುವ ಚಂದ್ರನ ಕಂಡೆ
ಬಿಳಿ ಹಾಲನಂತೆ ಮೋಡದ ಮರೆಯಲಿ
ಚಲಿಸುವ ಚಂದ್ರನ ಬಿಂಬದಿ
ನನ್ನಯ ಹುಡುಗಿಯ
ಚೆಲುವ ಕಂಡೆ
ಮರೆಯೋಗೋ ಮುನ್ನ
ಸೆರೆ ಹಿಡಿದು
ಬೆಳಕು ಕೊನೆಯಾಗೋ
ಒಲವ ಪಡೆದು
ನಕ್ಷತ್ರದ ಊರಲ್ಲಿ ಅವಳ ತೇರು
ಸೀರಿಯಲ್ ಸೆಟ್ ಬೆಳಕಲಿ
ನನ್ನವಳ ಮುದ್ದು ನಗುವು ಜೋರು
ಬಾಳುಕಾಡೊ ಬಳ್ಳಿ ನನ್ನವಳು
ನುಲಿಯುತಿರುವ
ಅವಳ ನೋಡಿರಲು
ಕಣ್ಣ ಹೊಡೆದು ಉಲ್ಕೆ ಬಿದ್ದಂತೆ
ಹುಣ್ಣಿಮೆಯ ಚಂದ್ರ ನಾಚಿ ನಕ್ಕಂತೆ
ಮರೆಯಾದ ಬದುಕಿಗೆ
ಬೆಳಕು ತಂದವಳು
ಬೆರಗಾಗೋ ಚೆಂದದ
ಸೊಬಗು ನನ್ನವಳು
ಹುಣಿಮ್ಮೆಯ ಬೆಳದಿಂಗಳು
****-*ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment