ಗುಲ್ಮೋಹರ



ಕೆಂಪು ಕೆಂದುಟಿಯಲಿ

ನಗುವ ನಯನದ ಹೂವೆ

ಹಸಿರು ಎಲೆಯಾಲಿ

ಅರಳಿದ ಕೆಂಪು ಕೆನ್ನೆಯ ಚೆಲುವೆ


ಹೂವ ಅರಳಿ ಮರ ತುಂಬಿ

ನನ್ನ ಭಾವನೆಗಳ ಮನೆ ತುಂಬಿ

ಕೆಂಪು ಚಾವಣಿಯಾದೆ ಮರಕೆ

ನನ್ನ ಕನಸ್ಸುಗಳ ಅರಕೆ


ಹಬ್ಬದಿ ಎತ್ತು ಕರುಗಳ ಎಗಲೇರಿ

ಗಂಟೆ ಸದ್ದಿನ ಸಪ್ಪಳಕೆ ನೀ ಅರಳಿ

ಬಸವನ ದಿಬ್ಬಣ ನಡೆವಾಗ

ದಾರಿಯಲಿ ನೋಡುಗರ ಮನ

ಸೆಳೆದ ಗುಲ್ಮೋಹರದ ಹೂವೆ

ಕೆಂಪು ಕೆನ್ನೆಯ ಕೆಂದುಟಿಯ ಚೆಲುವೆ


ಮೊಗ್ಗ ಅರಳಿ ನೆಲದಲ್ಲಿ ನಗುವಾಗ

ಕೆಂಪು ಗಂಬಳ ಹಾಸಿದಂತೆ ಕಂಡಿತು

ನಾ ನೋಡಿ ದಾರಿಯಲಿ ನಡೆವಾಗ

ಮನವು ಕರಗಿತು ಒಲವು ತುಂಬಿತು


********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35