ಕವಿಯದೇನಾ



ಕವಿಯದೇನಾ ಕವಿಯದೇನಾ

ಬಾವನೆಗಳ ಕನಸಾ ಕವನ ಗೀಚಿ

ಕನಸ್ಸುಗಳ  ಸವಿಯ ಗೋಚಿ

ಮನಸ್ಸುಗಳ ಮಾತು ದೋಚಿ

ದ್ವೇಷ ಅಸೂಯೆಗಳ ಕಳಚಿ

ಮಧುರ ಕ್ಷಣವೂ ಅರಳುವ ಸಮಯದಿ

ಕವಿಯದೇನಾ ಕವಿಯದೇನಾ


ಮೊಗ್ಗೋಂದೂ ಅರಳಿ ಹೂವಾಗಿ

ದುಂಬಿಯೊಂದು ಹೂವ ಮುತ್ತಿಟ್ಟು

ತನಗಾಗಿ ಸಿಹಿಯ ಕೂಡಿಟ್ಟು

ಪ್ರೀತಿಯ ಸೋಗಡ ಬಚ್ಚಿಟ್ಟು

ಸಿಹಿಯ ಸವಿಯುವ ಕ್ಷಣದಿ

ಕವಿಯದೇನಾ ಕವಿಯದೇನಾ


ಪ್ರಕೃತಿಯ ಸೌಂದರ್ಯವ ವರ್ಣಿಸಿ

ಬೆಟ್ಟದಿ ಹಸಿರು ಮರ ಹುಂಕರಿಸಿ

ನದಿಯೊಂದು ಮೈ ತುಂಬಿ ಹರಿದು

ಹನಿ ನೀರು ಇಬ್ಬನಿಯಾಗಿ

ಬೀಳುವ ಸಮಯದಿ

ನನ್ನ ನಾ ಮರೆತು ಕವಿಯದೇನಾ

ಕಂಡ ಕನಸ ಗೀಚೋ ಕವಿಯದೇನಾ


ಪ್ರೀತಿಯ ನಲ್ಲೆಯ ಕುಡಿ ನೋಟ

ಮುಂಗುರಳ ಕೂದಲ ಮುದ್ದಾಟ

ನಗುವಿನ ಪ್ರೀತಿಯ ತುಂಟ ಕಳ್ಳಾಟ 

ಒಲವ ಸೋಗದಲಿ ಸೌಂದರ್ಯ

ನನ್ನ ಸೆಳೆವಾಗ ಮೌನದಿ ಮೂಕ

ಕವಿಯದೇನಾ  ಕವಿಯದೇನಾ


***********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35