ಒಂಟಿ ನಾನೀಗ
ಪ್ರೀತಿ ಮನೆಯಲಿ
ಒಂಟಿ ನಾನೀಗ
ನಿನ್ನ ನೆನಪುಗಳು
ಸುಡುತ್ತಿವೆ ನನಗೀಗ
ಉದುರಿದ ತರಗೇಲೆಯು
ಮರದ ಅನುರಾಗ
ತನ್ನಯ ಹಸಿರು ಕನಸ
ಸುಟ್ಟಂತೆ ಹೀಗಾ
ಬರಡು ಭೂಮಿಯಲಿ
ಸುಡುವ ಮರಳಂತೆ ಪ್ರೀತಿ
ಮಳೆಯ ಹನಿ ಕೂಡ
ನೋವಲ್ಲಿ ಮಾಯಾದ ರೀತಿ
ಮನಸ್ಸು ಬೇಯ್ಯುತ್ತಿದೆ
ಕನಸು ಕರಗುತಿದೆ
ಒಲವು ಸುಡುತಿದೆ
ಕಾಡಗಿಚ್ಚು ಅತ್ತಿದ ರೀತಿ
ಪ್ರೀತಿ ಮನೆಯಲ್ಲಿ
ಒಂಟಿ ನಾನೀಗ
ಸುಡುವ ನೆನಪುಗಳೇ
ಸಂಗಾತಿ ನಂಗೀಗ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment