ಮುದ್ದು ಗಿಣಿ
ಮುದ್ದಾದ ಹುಡುಗಿ
ನೀ ತುಂಬಾ ಬೆಡಗಿ
ನಾ ಹಾಗೆ ಕರಗಿ
ನೀರಾದೆ ಮರುಗಿ
ಹೃದಯದ ಬಡಿತ
ಮನಸಿನ ಮಿಡಿತ
ಒಲವಿನ ಸೆಳೆತ
ಸಿಲುಕಿ ಹಾಗೇ ಕರಾಗುತಾ
ಒಲವ ಚಡಪಡಿಕೆ
ಕನಸುಗಳ ಮರೀಚಿಕೆ
ನಿನಗಾಗಿ ತಡಪಡಿಕೆ
ಸೇರಲು ಕನವರಿಕೆ
ಪ್ರೀತಿ ಸುಳಿಯಲಿ ಸಿಲುಕಿ
ನಿನ್ನನ್ನು ಹುಡುಕಿ
ಕನಸುಗಳ ಕೆದಕಿ
ಹೊರಬಂತು ಸಡಗರ
ಮುದ್ದಾದ ನಿನಗೆ
ನೋಟ ಸಾಕೆನೆಗೆ
ಪ್ರೀತಿ ಅಪ್ಪುಗೆ
ಬಯಸಿದೆ ಬೆಸುಗೆ
ಬಳಿ ಬಾರೆ ಒಲವೇ
ಬಯಸಿದೆ ಮನವು
ನಿನ್ನೆ ನನ್ನ ಒಲವು
*******ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment