Posts

Showing posts from January, 2022

ಅಲೆಮಾರಿ ನಾ

Image
ಗುರಿಯಿಲ್ಲದ ಅಲೆಮಾರಿ ನಾ ನಡೆದ ದಾರಿ ಕಲ್ಲು ಮುಳ್ಳಿನಾ ಎಳುಬಿಳಿನ ಜೀವನವೇ ಮುಗಿಯದ ಯಾತನೆಯಲ್ಲಿ ಈ ಬದುಕಿನ ಪಯಣ ನೂವುಂಟು ನೂರಾರು ಮನಸು ಮಸಣದೂರು ಸೆಳೆವಾಗ ಜೀವನದ ಸುಳಿ ಅರಿವೇ ಇಲ್ಲದ ಮನಗುಳಿ ಸಾಗು ಸಾಗುತ ಪಯಣ ಬೇಸರ ಕಾಲು ದಾರೀಲಿ ಜೀವನ ಸಂಹಾರ ಸೋಲು ಎಂಬ ಈ ಉಪಹಾರ ಸುಟ್ಟಿತೆ ನನ್ನ ಜೀವ ಕೈಯಾರ ನೆಮ್ಮದಿ ಜೀವನದ ಗಂಟು ಆಸೆಗಳು ಬದುಕಲಿ ನೂರೆಂಟು ಗುರಿಯಿಲ್ಲದ ಅಲೆಮಾರಿ ನಾ ನೋವಿನ ಅಲೆಯಲ್ಲಿ ಬದುಕುಳಿದೆ ನಾ ***********ರಚನೆ ******** ಡಾ.ಚಂದ್ರಶೇಖರ. ಸಿ. ಹೆಚ್

ಮಸಣದ ತೇರು

Image
  ಮಸಣದ ತೇರು ನೋಡಿರೋ ಅಣ್ಣ ವಿಧಿಯಟಾದಂತೆ ಬದುಕಿನ ಬಣ್ಣ ನೀಡಿಲ್ಲ ಸುಳಿವು ಈಗೇಕೆ ಅಳಿವು ಕಂಡ ಕನಸಿಗೆ ಬಂದೈತಿ ಬರವು ನನ್ನಯ ಭಕ್ತಿ ನನ್ನ ಕಾಯಲಿಲ್ಲ ಆಸೆಯ ಬುತ್ತಿ ನಾನು ಹೊತ್ತು ವಯ್ಯಾಲಿಲ್ಲ ಸುಡುಗಾಡು ಏಕೋ ಕೈ ಬಿಸಿ ಕರೆಯಿತ್ತಲ್ಲಾ ಕಣ್ಣ ಮುಚ್ಚಿ ಬಿಡೋವೊಳಗೆ ಜೀವ ಹಾರಿತಲ್ಲಾ ಜೀವನವು ನಡೆವಾಗ ಬದುಕು ಎಷ್ಟು ಚೆನ್ನ ಜೀವವ ಬಿಡುವಾಗ ಕೊನೆಉಸಿರೇ ಕನ್ನ ಬಾಳ ದಾರಿಯಲಿ ಬೆಂದ ಹೃದಯವೇ ಕೇಳು ಮನಸು ಮಿಡಿದೈತೆ ನೋವಿನ ಗೋಳು ಸ್ಮಶಾನದಲ್ಲಿ ಮಣ್ಣಲಿ ಮಣ್ಣಾಗೋ ದೇಹ ಹಣೆಬರಹ ಬರೆದವನಿಗೆ ಹೊತ್ತಯೋ ಮೋಹ ಕಾಣದ ಲೋಕವು ಕೈ ಬಿಸಿ ಕರೆದಂತೆ ಮಸಣದ ತೇರು ನನ್ನವರು ಎಳೆದಂತೆ ಮಸಣದ ತೇರು ನೋಡಿರೋ ಅಣ್ಣ ವಿಧಿಯಟದಲ್ಲಿ ಮಾಸಿತು ಬದುಕಿನ ಬಣ್ಣ ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಹೋತ್ತಿದೆ ಕಿಡಿ

Image
  ಮನಸು ಮನಸುಗಳ ನಡುವೆ ಕಿಡಿ ಬದುಕಿನ ಪಯಣವೇ ಸ್ವಲ್ಪ ತಡಿ ಸುನಾಮಿಯ ಅಲೆಗಳೇ ದಡಕೆ ಬಡಿ ಪ್ರೀತಿಯ ಹೃದಯಗಳಿಗೆ ಈಗೇಕೆ ಚಡಿ ಯಾರದೋ ಬೇಗೆಗೆ ಬಯಲಾಯ್ತು ಬದುಕು ಕನಸು ಕಂಡ ಮನಸುಗಳ ನಡುವೆ ಬಿರುಕು ಕಂಬನಿ ಎಂಬಾ ಕಣ್ಣೀರ ಚುರುಕು ಪ್ರೀತಿ ಮನಸ್ಸುಗಳ ಸೇತುವೆ ಮುರುಕು ನಡೆದೊಷ್ಟು ದೂರ ನೋವಿನ ತೀರ ಮರೆಯಲಿ ಎಗೆ ಒಲವ ನೆನಪಿನ ಭಾರ ಪ್ರೀತಿ ಸಮುದ್ರದಲ್ಲಿ ನಿನ್ನಯ ಗೋಪುರ ಕಂಡ ಕಂಡೊನೆಯೇ ಚೂರಾಯ್ತು ಒಲವ ಗೋಪುರ ಕನಸು ಕಾಣಲು ಮನಸಿಲ್ಲ ನನಗೆ ಹೋತ್ತಿದ ಕಿಡಿಗೇ ಹುರಿದೋಯ್ತೆ ಬದುಕು ಕೊನೆಗೆ ಯಾಕೋ ಭಾರ ಜೀವನದ ನಡಿಗೆ ಮನಸಿಗೆ ಸಾಕಾಯ್ತು ಜೀವವೇ ಕೊನೆಗೆ ********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್t

ಕವನದ ಸಾಲು

Image
ಬರೆಯುವ ಕವನ ಕಾಡಿತೇ ನನ್ನ ಓದುಗರ ಮನಸ ಗೆಲ್ಲುವುದೇ ಇನ್ನ ರುಚಿಸಲೇ ಇಲ್ಲ ಸಾಲುಗಳ ಪದವು ಅಂತ್ಯಪ್ರಾಸ ಏಟುಕದ ಜ್ವರವು ಬರೆಯಲು ಹೋರಟೆ ಪ್ರೀತಿ ಕಥೆಯ ಮನವು ಹೇಳಿತು ಬೇಡವೋ ಗೆಳೆಯ ನಸುಕಿನ ನಯನಕೆ ಸೋಲಿನ ರುಚಿ ಪದಗಳ ಸಾಲು ಕೇಳಿತು ಶುಚಿ ಹುಡುಕುತ ಹೊರಟೆ ಪದಗಳ ಸಾಲು ಬರೆದ ಸಾಲು ನಗುವಿನ ಸೋಲು ನನ್ನಯ ಬದುಕಲಿ ಕವನದ ಚಿತ್ತಾರ ಹೊಳೆದ ಪದಗಳ ಪ್ರೀತಿಯ ಸಹಕಾರ ಬರೆದ ಮೇಲೆ ಬೇಸರ ಏಕೆ ನೆನಪಿಗೆ ಬಾರದು ಹಾರಿದ ನೌಕೆ ಕಾರಣವಿಲ್ಲದೆ ಕಥೆ ಬಾರದು ಪದಗಳ ಪುಂಜ ಹಿಡಿದಂತೆ ಹುಂಜ ಯೋಚನೆಯಲ್ಲಿ ಗೀಚಿದೆ ಕವನ ಪದಗಳ ಸಾಲು ಮನದಲಿ ಜನನ ರುಚಿಸಿತೇ ವನಿತೆ ನಲ್ಮೆಯ ಕವಿತೆ ಯಾರಿಗೆ ಬೇಕು ಈ ಪ್ರಾಸದ ಅಣತೆ *********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಮಾಗಿದ ಮನಸು

Image
ಮನಸು ಮನಸು ಮಾಗಿದ ಮೇಲೆ ಕನಸು ಕೊಡ ಸೊಗಸು ಮಾತು ಮಾತು ಬೇರೆತ ಮೇಲೆ ಸಮಯವೇ  ನಮ್ಮ ಕರೆಸು ಪ್ರೀತಿ ಹೃದಯ ಬಡಿತ ಏಕೋ ಕೇಳಿದೆ ನಿನ್ನನು ಸವಿಯ ತಿಳದ ಕೂಡಲೇ ಒಲವು ಏಕೋ ಕಾಡಿದೆ ನಿನ್ನಯ ನುಡಿಯ ಹರೆಯದ ದೇಹಕೆ ಮಾಗಿಯ ಚಳಿ ಮಾವಿನ ತೋಟದಿ ಮುದ್ದು ಗಿಳಿ ಚಳಿಯಲ್ಲಿ ನಲುಗಿದೆ ದೇಹ ಯಾಕೋ ಏನೋ ನಿನ್ನ ಮೋಹ ನೂರಾರು ಕನಸು ಶುರುವಾಯ್ತು ನಿನ್ನ ಮೇಲೆ ಮನಸಾಯ್ತು ಬಯಸಿದ್ದು ನನಗೆ ಸಿಕ್ಕಯ್ತು ನಿನ್ನ ಪ್ರೀತಿ ವರವಾಯ್ತು ನೂರೆಂಟು ಅಸೆ ಬೇಡಿದೆ ನನ್ನ ಇತವಾದ ಮಾತು ತುಂಬಾ ಚೆನ್ನ ಒಲವಿನ ಹೂವೆ ಬೇಡುವೆ ನಿನ್ನ ನಿನ್ನ ಪ್ರೀತಿ ನನಗಾಗಿ ಓ ಚಿನ್ನ  *********ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ನೀ ನಗುವು

Image
  ನಿನ್ ಎಂಥ ಚೆನ್ನ ಸೋಜಿಗವೆ ಇನ್ನ ನೋಟದಲಿ ಉತ್ತರ  ಸರಿ ಇದೇ ಎತ್ತರ ನಿನ್ ಎಂಥ ಚೆನ್ನ ಮನವೇಕೋ ರನ್ನ  ಕರೆದಂತೆ ನೀ ನನ್ನ  ನೀ ಬಹಳ ಹೇಳಿದೆ ಮಾತಾನಾಡದೆ ಚಿನ್ನ ನಿನ ನಗು ತುಂಬಾ ಘಾಟಿ ನಡೆ ಏಕೋ ಚೂಟಿ ಮಾತಿನಲಿ ಕ್ಯೂಟಿ ನೀ ತುಂಬಾ ಸ್ವೀಟಿ ಕನಸು ಮನಸ ತಾಗಿ ನನ್ನ ಬಳಿ ಕೂಗಿ ಕರೆದಂತೆ ನನಗಾಗಿ ತಿರುಗಿ ನೋಡಿದೆ ನಿನ್ನ ನೀ  ಬಹಳ ಹೇಳಿದೆ ಮಾತಾನಾಡದೆ ಚಿನ್ನ  ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಮಸಣದ ಬದುಕು

Image
  ಮನಸು ಹೇಳುವ ಮುನ್ನ ಮಸಣವಾಯಿತೇ ಬದುಕು ನಿನ್ನ ಕೂಗುವ ಹೃದಯ ಚೂರಾಯಿತೇ ಇಂದು ನೇಸರನು ಕೆಂಪಾಗಿ ಕಾದಿಹಾನು ದೇಹವನು ಸುಟ್ಟಿಹನು ನಿನ್ನ ಆಸೆಯನು ಇಟ್ಟಿಹನು ನೀನು ಇರದೇ ಇನ್ನ ಬದುಕು ಏನು  ಚೆನ್ನ ಮಾತಿಲ್ಲದೆ ಹೋರಟೆ ಅಣೆಬರಹ ಗೊರಟೆ ಯಾಕೀಗೆ ಜೀವನ ಸುಡುತಿಹುದು ಕನಸಿನ ಮೌನ ನಿನ್ನಾಸೆ ಬಿರುಗಾಳಿ ಬಾಳ ಬರಿದು ಮಾಡಿರಲು ಎಲ್ಲಿ ಹುಡುಕಲಿ ನಾ ನೀನೆಂಬ ತಂಗಾಳಿ ದೇಹ ದಣಿದಿದೆ ತನುವು ಮಣಿದಿದೆ  ಹುಡುಕುತ ನಿನ್ನ ಛಾಯೆ ಬದುಕು ಮೂರು ದಿನದ ಮಾಯೆ ಕನಸ ಕಂಬನಿ ಅಳುತಿರುವ ಇಬ್ಬನಿ ಬಯಸಿದೆ ನಿನ್ನ ಮತ್ತೆ ಬಾ ಬಾಳಿನಲಿ *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಶಿವಾಯ ನಮಃ

Image
ಬೂಮಂಡಲವ ಸುತ್ತಿ ಆಕಾಶವ ಬದಿ ಗೊತ್ತಿ ಬೆಂಕಿಯ ಬರಸೆಳೆದು ದರೆ ಹೊತ್ತಿಹುರಿವಾಗ ಶಿವ ನೀನು ಬಲ್ಲೆಯ  ಯಾರಿಗೆ ಅಹುತಿ ನಡೆಯಲಿ ಕೆಂಡ ಮನವರಿಯದ ರುಂಡ ಬದುಕು ಬೋರ್ಗರೆಯಲು ಮನವು ಏಕೋ ಮಸಣ ಬೂದಿ ಬಳಿದ ಅಘೋರಿಗೆ ಶಿವನೇ ಪರಮ ಪ್ರಾಣ ವೇಷದಲಿ ಶಿವನ ನಾಮ ಬಂಗಿಯ ಒಲವೇ ಪ್ರೇಮ ಈಶ್ವರನ ಜಫೀಸುತ ಬಮ್ ಬಮ್ ಬೋಲೇ ಕೂಗುತಾ ಮಸಣವೆ ಜೀವ ರಾಶಿ ವಿಧಿ ಅರಸಿ ಮನ ಸಹಿಸಿ ವಿಬೂತಿಯಲಿ ವರ ನೀಡಿ ಶಿವನನ್ನೇ ಸ್ವೀಕರಿಸಿ ದೇವಾ ಜೈ ಜೈ ಬಮ್ ಬಮ್ ಬೋಲೇ...,.. ********ರಚನೆ ********** ಡಾ. ಚಂದ್ರಶೇಖರ ಸಿ. ಹೆಚ್

ಕನಸ ಅಸೆ

Image
ಕನಸಿನ ಅಸೆ ಏಕೋ ಎತ್ತರ ಮನಸಿನ ಭಾಷೆ ಅದಕೆ ಉತ್ತರ ಬದುಕು ನೀನು ಭ್ರಮೆಯ ಬಿಟ್ಟು ನೋವು ದುಃಖ್ಖ ಮೂಟೆ ಕಟ್ಟು ನಾಳೆ ಎಂಬ ಒಲವೇ ಚಲವು ಸಿಗುತ್ತಿಲ್ಲ ಏಕೋ ಗುಟ್ಟಾ ಸುಳಿವು ಮೋಹವೆಂಬ ಬದುಕ ಅಳಿವು ತೊರೆದರೇನೇ ನಿನಗೆ ನಲಿವು ಬದುಕ ಪಯಣ ಮೂರು ದಿವಸ ಸಿಗಲಿ ನಮಗೆ ಹೊಸ ಹರುಷ ಗೆಲುವು ಒಂದೂ ಮತ್ತೆ ಸಿಕ್ಕಿ ಬೆಂದ ಜೀವದ ನೋವ ಎಕ್ಕಿ ಕನಸ ಕಂಡ ಮನಸು ನನಸು ಸಹಬಾಳ್ವೆ ಬದುಕ ಸೊಗಸು ಮರೆತು ಹಾಡಿ ದ್ವೇಷದ ಮುನಿಸು ಪ್ರೀತಿಯನ್ನು ಮತ್ತೆ ಗಳಿಸು ಒಲವ ಬದುಕು ಹಿತವಾಗಿ ಮನಸು ಇರಲಿ ಖುಷಿಯಾಗಿ ದುಃಖ್ಖ ಸಿಟ್ಟು ಮರೆತೋಗಿ ಬಾಳೋಣ ನಾವು ಹಾಯಾಗಿ ಕಂಡ ಕನಸು ಗೆಲುವ ನಗುವಾಗಿ ********ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್

ಕಾಲದ ಸುಳಿ

Image
ಕಾಲವು ಹೇಳಿತು ಕಥೆ ಒಂದೂ ಜೀವಿಯ ವ್ಯಥೇ ಸುರಿಲ್ಲದ ಸೂರಿನ ರಾಣಿ ನೋವೆ ಜೀವದ ಏಣಿ ಮೊಗ್ಗು ಅರಳಿತು ಹೂವಾಗಿ ಹೂವು ಬಾಡಿತು ಕಸವಾಗಿ ಸಮಯ ಹೇಳಿತು ಸವಿಯ ಕಾಲ ಕಾದಿತ್ತು ವಿಧಿಯ ಕನಸು ನನಸಾಗೋ ಸಮಯ ನನಸು ಬದುಕಿನ ವಿಸ್ಮಯ ಸಾವಿರ ಸಾಲು ದಾರಿ ಎದುರು ನಡೆವ ನಡಿಗೆಯೇ ತೊಡರು ಕಣ್ಣಾರೆಪ್ಪೆಯೊಳಗೆ ಮಿಂಚಿತೆ ಕಾಲ ಕಣ್ಣ ನೀರು ನೋವಿನ ಜಾಲ ಸಮಯ ಹೇಳಿತೆ ಆಸೆಗೆ ಉತ್ತರ ಕಾಲ ಬಂದಿತೆ ನೋಡುವ ಚಿತ್ತಾರ  ಕನಸಿನ ನಾಳೆ ಬಂದಿತೆ ಮತ್ತೆ ಆಸೆಗೆ ಖುಷಿಯು ಸಿಕ್ಕಿತೆ ನೋವಿಗೆ ಕೊನೆಯು ದಕ್ಕಿತೆ ಕಾಲ ಚಕ್ರ ನನ್ನ ಮೇಲೆ ನೂಕಿತೆ  *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕನಸಿನ ತೇರು

Image
  ನಸುನಗುವ ಮಾತಿಗೆ ನಿನಾದೆ ಬೇಜಾರು ಜೀವನದಿ ನೋವುಗಳು ಸಾವಿರಾರು ಯಾರಿಗೆ ಹೇಳಲಿ ನನ್ನ ಬದುಕಿನ ಬಣ್ಣ ನೀರಾಗಿ ಹರಿಯುತಿದೆ ನೋವಿನ  ಕಣ್ಣ ಮನಸುಗಳ ನಡುವೆ ಪ್ರೀತಿಯ ತಿಕ್ಕಾಟ ಕಲೆತ ಹೃದಯಗಳ ನಡುವೆ  ಕಿತ್ತಾಟ  ಕಟ್ಟಿದ ಕನಸು ಪುಡಿಯಾಯಿತೇ ನೋವಲಿ ಮನಸ್ಸು ಚೂರಾಯಿತೇ ಜೇವನ ಅರ್ಥವಾಗುವ ಒಳಗೆ ವಂಚೂರು  ಬದುಕಿನ ಮಳಿಗೆ ಸೋರುವ ಸೂರು ನನ್ನ ಕಣ್ಣೀರ ಒರೆಸುವರ್ಯಾರು ಯಾರಿಗೆ ನೀಡಲಿ ನಾ ದಿನ ದೂರು ಮರೆಯದ ಯಾತನೆಯಲ್ಲಿ ಸಾಗಿದೆ ಜೀವನ ನಗುವ ಕನಿಸಿಗೆ ಹಾಕಿದೆ ಬೇಲಿಯನ ನಾನೇಗೆ ಬಾಳಲಿ ಈ ಬಣ್ಣದ ತೆರಲಿ ಹೇಗೆ ಕಾಲವ ದೂಡಲಿ ಈ ಗುಬ್ಬಚ್ಚಿ ಗೂಡಲಿ ಕನಸುಗಳ ಗರಿ ಬಿಚ್ಚಿ ಆಕಾಶಕ್ಕೆ ಹಾರಲೆ ನೋವಿನ ಸುಳಿಯಲಿ ಕೂರಲೇ ಸೂರಲಿ ಮನಬಿಚ್ಚಿ ಕುಣಿಯಲೇ ಚಿಟ ಪಟ ಮಳೆಯಲಿ ಯಾರಿಗೂ ಇಲ್ಲದ ಈ ಬಣ್ಣ ಮಾಸಿದೆ ಏಕೋ ಕೆಸರಲಿ *******ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್

ನನ್ನ ಸಿನಿಮಾ

Image
ಹೃದಯವೇಕೋ ಮಿಡಿಯುತಿದೆ  ನಿನ್ನ ಅಸೆ ಹೊತ್ತು ನಾನು ಹೇಗೆ ಜೀವಿಸಲಿ   ನನ್ನ ಕನಸ ಕಿತ್ತು ಮನುವು ಹಾಗೇ ಹೇಳುತಿದೆ  ನೀನು ತುಂಬಾ ಚೆಂದ ಮತ್ತೆ ಹೇಗೆ ವರ್ಣಿಸಲಿ ನಿನ್ನ ಅಂದ ಮಾತು ಏಕೋ ಮೌನವಾಯುತು ನುಡಿಯು ಹಾಗೇ ಕವನವಯ್ತು ಕವನವೀಗ ಚೆಂದ ಹಾಡಯ್ತು ಹಾಡಿಗೆ ನಾವು ಕುಣಿಯೋಣವೆ ಕುಣಿದ ಹೆಜ್ಜೆ ನಾಟ್ಯವಾಯ್ತು ನಾಟ್ಯ ಹಾಗೇ ಮನಸ ಕದ್ದಯ್ತು ನನ್ನ ಸಿನಿಮಾ ನಟಿಯದೆ ನಾನು ನಿನ್ನ ಪ್ರೀತಿ ನಟನಾದೆ ಯಾರು ಜೀವನದ ಸಿನಿಮಾ ಕೇಡಿ ಕಳಿಸಹನು ದೇವರು ನೋಡಿ ಒಮ್ಮೆ ನನಗೆ ತಿಳಿಯಬಾರದೆ ನಕ್ಕು ನೀನು ನಲಿಯುವಾಗ  ತಿರುಗಿ ಒಮ್ಮೆ ನೋಡಬಾರದೇ ನನ್ನ ಜೀವನದಿ ನನ್ನ ಸಿನಿಮಾ ಹೀರೋ ನಾನೇ ಬಯಸಿ ತಂದ ಚೆಂದದ ನಟಿ ನೀನೇ ನಡೆಯುತಯ್ತಿ ನಮ್ಮ ಸಿನಿಮಾ ದೇವಾ ಕೊಟ್ಟ ಕತೆಯಲಿ  ಚಿತ್ರವೀಗ ಚಲಿಸುತಿಹದು ಬ್ರಹ್ಮ ಬರೆದ ವಿಧಿಯಲ್ಲಿ  ಸಿನಿಮಾ ಅಂತ್ಯ ಸಾಗುವುದು ಮೋಡ ಕವಿದ ಮನೆಯಲಿ    ********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಬೆವರ ಹನಿ

Image
  ಕಷ್ಟದಿಂದ ಸುರಿವ ಬೆವರ  ಹನಿ ಮುತ್ತಾದೀತೇ ಹಸಿವನ ಹೊಟ್ಟೆಗೆ  ಅನ್ನದ ತುತ್ತಾದಿತೇ ಸೂರ್ಯನ ಕಿರಣ ನನ್ನ ಸುಟ್ಟೋಡಿತೇ ಸಂಜೆಯ ಒಳಗೆ ಕಷ್ಟದ  ಬಣ್ಣ ಕಪ್ಪಾದೀತೇ ಮುಂಜಾನೆಯ ಮಂಜು ನನ್ನ ತಬ್ಬಿತೆ  ತಂಗಾಳಿ ಚಳಿ ನೋಡಿ  ದೇಹ ಬೆಚ್ಚದೀತೇ ಕೊಂಚ ಅನ್ನ ಹಸಿವ ನಿಗಿ ಮನ ಕುಣಿಯಿತೇ ಮಾಡಬೇಕು ಕಾಯಕ  ಕವಾ ನೀಡಿ ದೇಹಕ ಶ್ರಮಿಸಿ ದಣಿಸಿ ದುಡಿಯಬೇಕು ಒಪ್ಪೋತಿನ ಊಟಕ ಬಡವನ ಬದುಕು ಬೆಳಕು ಇರುಳಿನಂತೆ ತಳುಕು ಹಗಲು ಕುಣಿದು ಬೆವರ ಸುರಿದು ತೊಳೆಯಬೇಕು ಕೊಳಕು ಗಂಜಿ ಅನ್ನ ಜೀವನದ ಅಮೃತ ದೇವಾ ಕೊಟ್ಟ ಶಾಪವೇಕೋ ವಿಕೃತ ಯಾರ ನಾನು ಬೈಯಲ್ಲಿ ವಿಧಿಯನೇಕೆ ದೂರಲಿ ಹುಟ್ಟಿದ ಜೀವ ನೋವ ನುಂಗಿ ಆಸೆಯ ಗೋಪುರದಿ ಅರುಕು ಅಂಗಿ ಇಟ್ಟಿಗಾಗಿ ದುಡಿಯುವೆ ಹೂಟ್ಟೆಗಾಗಿ ಮಣಿಯುವೆ ಕೆಲಸ ಕೊಟ್ಟ ದೇವರಿಗೆ ಕೈ ಎತ್ತಿ ಮುಗಿಯುವೆ ಸ್ನೇಹದಿಂದ ಸಲವುವರಿಗೆ ಸಾವು ಕೂಡ ಪ್ರೀತಿ ಸಲುಗೆ ಚೆಡಿಸಿ ಹೀಯಾಳಿಸುವವರಿಗೆ ಜೀವ ಕೂಡ ಒಡೆದ ಮಡಕೆ *******ರಚನೆ*********** ಡಾ. ಚಂದ್ರಶೇಖರ. ಸಿ. ಹೆಚ್

ಮಕರ ಸಂಕ್ರಾಂತಿ

Image
ಸಡಗರದ ಸಂಕ್ರಾಂತಿ ತರದಿರಲಿ ಮತಿ ಬ್ರಾಂತಿ ನಡೆಯಲಿ ಸುಗ್ಗಿ ಕ್ರಾಂತಿ ರೈತರ ಜೇವನವು ಶಾಂತಿ ರಾಗಿಯ ಬೆಳೆ ಬಂತು ಅನ್ನದ ಸಿರಿ ತಂತು ಸುಗ್ಗಿಯ ಸವಿಯೋ ಸುಖದ ಶಾಂತಿಯೋ ಕಣದ ಬದುಕು ಕಷ್ಟಗಳ ಸವೆದು ಬರವನ್ನು ನಿಗಿ ಜೋಳಿಗೆ ತುಂಬಿತು ಜೋಗಿ ಹಸನದ ಜೀವನ ವ್ಯಸನವ ನೂಕಿ ಬಾಳಿನಲ್ಲಿ ಸಿಹಿ ಎಳ್ಳು ಬೆಲ್ಲವ ಹಾಕಿ ಹಾಡೋಣ ನಾವು ಸಂಕ್ರಾಂತಿ ಬಂತು ಕುಣಿಯೋಣ ನಾವು ಮನೆಮಂದಿ ನಿಂತು *********ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್

ಪ್ರೀತಿ ಮಾತು

Image
ಒಲವ ಮಾತು ಸಿಹಿಯಾತ್ತು ನಿನ್ನ ಬೆಸುಗೆ ಬಿಸಿಯಾತ್ತು ಹೆಸರು ಏಕೋ ಉಸಿರಾಯುತ್ತು ಬಾರೆ ಒಮ್ಮೆ ಬಳಿಗೆ ನಕ್ಕು ನೀ ಮೋಡವಿರದ ಬಾನಿನಲ್ಲಿ ಪ್ರೀತಿ ಹನಿಯ ಮಳೆಯತ್ತು ನೀರು ಇರದ ನದಿಯೊಂದು ತುಂಬಿ ಬಂದು ಸೇರಿತಿಂದು ತಿರುಗಿ ಒಮ್ಮೆ ನೋಡಬಾರದೇ ಹುಣ್ಣಿಮ್ಮೆಯ ಬಾನಿನಲ್ಲಿ ನಕ್ಷತ್ರಗಳ ಗೂಡಿನಲ್ಲಿ ಚುಕ್ಕಿಗಳು ಚೆಲ್ಲಾಪಿಲ್ಲಿ ಒಳೆವ ಚಂದ್ರನಂತೆ ನೀನು ಒಮ್ಮೆ ಕಾಣಬರದೇ ದಟ್ಟ ಅಡವಿಯ ಕಾಡಿನಲ್ಲಿ ಚಿಗುರಿದ ವಸಂತಮಾಸ ಮರದಿ ಕೂತ ಕೋಗಿಲೆಯೇ ಒಮ್ಮೆ ನೀನು ಹಾಡಬಾರದೆ  ಬಂಡೆ ಮೇಲೆ ಹರಿವ ನೀರು ಸಾಗಿದಂಗೆ ಒಲವ ತೇರು ಮುಂದೆ ನಗುತಾ ಹೋಡುವಾಗ  ಜಾರಿ ನನ್ನ ಒಮ್ಮೆ ಸೇರಬಾರದೆ ಮನದಿ ಪ್ರೀತಿ ಹುಟ್ಟಿ ಒಲವ ಬೆಸುಗೆ ಕದವ ತಟ್ಟಿ ನಿನ್ನ ಕರೆದು ಕೂಗುವಾಗ ಲವ್ ಯು ಎಂದು ಹೇಳಬಾರದೆ  ********ರಚನೆ *********- ಡಾ. ಚಂದ್ರಶೇಖರ. ಸಿ. ಹೆಚ್

ನೆನೆದು ನಿನ್ನ

Image
ನಾ ನೆನೆದು ನೆನೆದು ನಿನ್ನ ಹೇಗೆ ಮರೆಯಲಿ ಇನ್ನ ಮರೆತು ಹೋಗೋ ಮನಕೆ ನೆನಪು ಒಂದೂ ಬಯಕೆ ಕಾಡುತ್ತಿರುವ ಒಲವ ಹಸಿವು ಸುಡುತಿದೆ ವಯಸ್ಸ ತನುವು ಬಯಸುತಿದೆ ಸನಿಹ ಮನವು ಏಕೆ ಹೀಗೆ ಕಾಡೋ ಚೆಲುವು ಹೃದಯ ಕೊಂದು ರಕ್ತ ಬೆಂದು ಕನಸ ತಿಂದು ಒಲವು ಬಂದು ಮೌನವೇಕೋ ಮರೆಯಾಗಿದೆ ಮಾತಾ ನುಡಿಯು ಬಾರದಾಗಿದೆ ನಿನ್ನ ನೆನೆದ ದಾರಿಯಲ್ಲಿ ನೋವ ಮುಳ್ಳು ಬಂದು ಚೆಲ್ಲಿ ದಾರಿ ನೋವು ನೀಡಿದೆ ಪ್ರೀತಿ ಮರೆತು ಕನಸ ತೊರೆದು ಕಣ್ಣ ಹನಿಯು ಸುರಿದಿದೆ ಯಾರಿಗಾಗಿ ಪ್ರೀತಿ ಮೋಹ ಮನದಲ್ಲಿ ನಂಬಿಕೆ ದ್ರೋಹ ಏಕೋ ಮನೆಯ ಮಾಡಿದೆ ಕಾಣದ ತೀರ ಕೈ ಬಿಸಿ ಕರೆದಿದೆ ***********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

ನೂರು ಅಸೆ

Image
ನೂರಾರು ಅಸೆ ಕನಸ ಭಾಷೆ ಕಾಡಿತೇಕೆ ನನ್ನನ್ನೇ ಬರಡು ಮನದಿ ಪ್ರೀತಿ ಮಳೆಯೂ ಸುರಿಯಿತೇಕೆ ಸುಮ್ಮನೆ ಒಲವ ನದಿಯು ಹರಿದು ತೋರಿತು ದಾರಿಯ ಕಣ್ಣ ರೆಪ್ಪೆ ಮುಚ್ಹೋವಳಗೆ ಸುಮುದ್ರ ನುಂಗಿತ್ತು ನದಿಯ ಕನಸ ಬದುಕು ಮುಗಿಯಿತೇ ಪ್ರೀತಿ ಹಿತವು ಮರೆಯಿತೇ ಕಳೆದ ನೆನಪು ಮರೆಯಾಯಿತೇ ಒಲವ ನಗುವ ಕೊಂದೀತೆ ಮರೆಯಲೋರಾಟೆ ನಿನ್ನ ಹೆಸರು ಬರಡು ನೆಲದಿ ಹಚ್ಚ ಹಸಿರು ಶ್ವಾಸದಲ್ಲಿ ನಿನ್ನ ಉಸಿರು ಮನಸ ನೋವು ಕೆಸರು ಹಿಂಡಿತೇಕೆ ನನ್ನನ್ನು. **********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

ಕುಡಿತದ ಅಮಲು

Image
ಕುಡಿತದ ಹೊನಲು ನಶೆಯಲ್ಲಿ ಅಮಲು ಬಿಡಲೋರೇಟೇ ನಿನ್ನ ಬಿಡಲಾರೆ ಓ ಚಿನ್ನ ನಡುಗೆಯೇ ನಾಟ್ಯ ನೂಡಿಯೆ ವಾಕ್ಯ ಮನದಲ್ಲಿ ಬಂತು ಕನಸನ್ನು ತಿಂತು ಮನದಲ್ಲಿ ತುಡಿತ ಕುಡಿತದ ಮೊರೆತ ಪ್ರೀತಿಯ ಹರಿತ ಅರಿತವನೆ ಬಲ್ಲ ಕುಡಿತದ ನುರಿತ ಕುಡಿದಾಗ ಬಲು ನಶೆ ತನು ಹೇಳಿದೆ ಉಷೆ ಬಿಡಲಾರೆ ನಿನ್ನ ಸುಟ್ಟುಬಿಡುವೆ ಚಿನ್ನ ದೇಹವೇ ಸಮಾಧಿ ಎಲ್ಲಿದೆ ಯುಗಾದಿ ನಿನಗೆಲ್ಲಿ ಜಾಗ ಆರು ಮೂರಡಿಯ ಸ್ವರ್ಗ ********ರಚನೆ ****** ಡಾ. ಚಂದ್ರಶೇಖರ. ಸಿ. ಹೆಚ್

ಬದುಕು ಬಣ್ಣ

Image
ಬದುಕೊಂದು ಒಲವಿನ ಬಣ್ಣ ನೋವೊಂದು ಕಾಡಿದೆ ನನ್ನ ಬಣ್ಣದಲ್ಲಿ ಕಳೆದೋಯ್ತು ಜೀವನ ರಂಗು ರಂಗದ ಒಲವಿನ ಕಥನ ಕಥೆ ನೂರು ಹೇಳಿದೆ ನೋವ ಚೂರು ಮನಸೆಕೋ ಏಳಿದೆ ಪ್ರೀತಿ ಬೇರು ಯಾರಿಗೆ ಹೇಳಲಿ ಕನಸ ಕಾರು ಬಾರು ಕೇಳೋರು ಯಾರು ನನ್ನ ತೊಡರು ಜೇವನದ ಕಥೆಗೆಲ್ಲಿದೆ ಮುಕ್ತಿ ಕೊಡು ದೇವಾ ಎದರಿಸುವ ಶಕ್ತಿ ನಿನ್ನ ನೆನೆವ ಪೂಜೆಯೇ ಭಕ್ತಿ ಮೋಸವನು ಭೇದಿಸುವ ಯುಕ್ತಿ ನೊಂದ ಮನವು ಯಾಕೋ ಕಾಡಿದೆ ನನ್ನ ಒಲವ ಪ್ರೀತಿಯ ಬೇಡಿದೆ ನಿನಗಾಗಿ ನನ್ನ ಬದುಕು ಮರುಗಿದೆ ಏನೋ ನನ್ನರಿವ ಮಾಯೆ ಕರಗಿದೆ ಹಗಲು ಕಳೆದು ಬೆಳಕು ಮುಗಿದು ರಾತ್ರಿ ಸರಿದು  ನಗುವ ಮೊಗವ ತೋರಿದೆ ನಿನ್ನ ಕಂಡ ಹೃದಯ ಏಕೋ ಬಡಿದಿದೆ ಪ್ರೀತಿ ತೇರು ಮನವ ಮುಟ್ಟಿ ಕರೆದಿದೆ  *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್

ಒಂದೂ ಮುಂಜಾನೆ

Image
  ಹಾಗೆ ಸುಮ್ಮನೆ ಒಂದೂ ಮುಂಜಾನೆ ಕಂಡೆ  ಒಲವ ಚೆಲುವೆ ನಿನ್ನನೇ ಕಣ್ಣು ತಾಗಿತ್ತು ನಿನ್ನ ಕೂಗಿತು ನಿನ್ನ ನೋಟಕೆ ಮನವು ಹದುರಿತು ನಡೆಯುತ ಮನವು ಕಂಡ ಚೆಲುವು ಹೇಳಿತು ಹಾಗೇ ನಿನ್ನ ಕಂಡ್ರೆ ಒಲವು ಮಾತಿನ ಬೆರಗು ಮನದಾಸೆ ಮೆರಗು ಬಡಿಯುತು ಹೃದಯ ನಿನ ನೋಡಿ ಕರಗು ಕನಸ್ಸೊಂದು ಕಂಡಂತೆ ನಿ ಬಳಿ ಬಂದೆ ಮರುಬೂಮಿಗೆ ಕಾಡೊಂದು ತಂದೆ ಹಸಿದ ಮನಸ್ಸಿಗೆ ನಿನ್ನೆ ಆಹಾರ ತಂಪಾದ ತಂಗಾಳಿ ಲಿ ವಿಹಾರ ಮುಂಗುರುಳು ಏಕೋ ಮಾಡಿದೆ ಮೂಡಿ ಸೂರ್ಯನೇ ನಕ್ಕನು ನಿನ್ನ ನೋಡಿ ಮನವೆಕೋ ಕಾಡಿದೆ ನಿನ್ನನೇ ಬೇಡಿ ಬಾರೆ ಚೆಲುವೆ ಕಾಡದೆ ಹೋಡಿ ಉಸಿರಿಗೆ ಉಸಿರಾಗುವೆ ನಾನು ಕನಸಿಗೆ ನೇಪಾವಗುವೆ ನಾನು ನಿನ್ನ ಒಲವ ಹಾಡಗುವೆ ನಾನು ನಿನ ಹೃದಯದಿ ಬೆರೆತೊಗುವೆ ನಾನು  *************ರಚನೆ *********** ಡಾ. ಚಂದ್ರಶೇಖರ. ಸಿ. ಹೆಚ್