ಕನಸ ಅಸೆ



ಕನಸಿನ ಅಸೆ ಏಕೋ ಎತ್ತರ

ಮನಸಿನ ಭಾಷೆ ಅದಕೆ ಉತ್ತರ

ಬದುಕು ನೀನು ಭ್ರಮೆಯ ಬಿಟ್ಟು

ನೋವು ದುಃಖ್ಖ ಮೂಟೆ ಕಟ್ಟು


ನಾಳೆ ಎಂಬ ಒಲವೇ ಚಲವು

ಸಿಗುತ್ತಿಲ್ಲ ಏಕೋ ಗುಟ್ಟಾ ಸುಳಿವು

ಮೋಹವೆಂಬ ಬದುಕ ಅಳಿವು

ತೊರೆದರೇನೇ ನಿನಗೆ ನಲಿವು


ಬದುಕ ಪಯಣ ಮೂರು ದಿವಸ

ಸಿಗಲಿ ನಮಗೆ ಹೊಸ ಹರುಷ

ಗೆಲುವು ಒಂದೂ ಮತ್ತೆ ಸಿಕ್ಕಿ

ಬೆಂದ ಜೀವದ ನೋವ ಎಕ್ಕಿ


ಕನಸ ಕಂಡ ಮನಸು ನನಸು

ಸಹಬಾಳ್ವೆ ಬದುಕ ಸೊಗಸು

ಮರೆತು ಹಾಡಿ ದ್ವೇಷದ ಮುನಿಸು

ಪ್ರೀತಿಯನ್ನು ಮತ್ತೆ ಗಳಿಸು


ಒಲವ ಬದುಕು ಹಿತವಾಗಿ

ಮನಸು ಇರಲಿ ಖುಷಿಯಾಗಿ

ದುಃಖ್ಖ ಸಿಟ್ಟು ಮರೆತೋಗಿ

ಬಾಳೋಣ ನಾವು ಹಾಯಾಗಿ

ಕಂಡ ಕನಸು ಗೆಲುವ ನಗುವಾಗಿ



********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ- ಭಾವಗೀತೆ ಸಂಕಲನ

ಸಂತೋಷವಾಗಿರಲು ಪ್ರಯತ್ನಿಸೋಣವೇ- ವ್ಯಕ್ತಿತ್ವ ವಿಕಸನ

Author biography of Chandrashekhar Channapura Halappa