ಒಂದೂ ಮುಂಜಾನೆ

 




ಹಾಗೆ ಸುಮ್ಮನೆ ಒಂದೂ ಮುಂಜಾನೆ

ಕಂಡೆ  ಒಲವ ಚೆಲುವೆ ನಿನ್ನನೇ

ಕಣ್ಣು ತಾಗಿತ್ತು ನಿನ್ನ ಕೂಗಿತು

ನಿನ್ನ ನೋಟಕೆ ಮನವು ಹದುರಿತು


ನಡೆಯುತ ಮನವು ಕಂಡ ಚೆಲುವು

ಹೇಳಿತು ಹಾಗೇ ನಿನ್ನ ಕಂಡ್ರೆ ಒಲವು

ಮಾತಿನ ಬೆರಗು ಮನದಾಸೆ ಮೆರಗು

ಬಡಿಯುತು ಹೃದಯ ನಿನ ನೋಡಿ ಕರಗು


ಕನಸ್ಸೊಂದು ಕಂಡಂತೆ ನಿ ಬಳಿ ಬಂದೆ

ಮರುಬೂಮಿಗೆ ಕಾಡೊಂದು ತಂದೆ

ಹಸಿದ ಮನಸ್ಸಿಗೆ ನಿನ್ನೆ ಆಹಾರ

ತಂಪಾದ ತಂಗಾಳಿ ಲಿ ವಿಹಾರ


ಮುಂಗುರುಳು ಏಕೋ ಮಾಡಿದೆ ಮೂಡಿ

ಸೂರ್ಯನೇ ನಕ್ಕನು ನಿನ್ನ ನೋಡಿ

ಮನವೆಕೋ ಕಾಡಿದೆ ನಿನ್ನನೇ ಬೇಡಿ

ಬಾರೆ ಚೆಲುವೆ ಕಾಡದೆ ಹೋಡಿ


ಉಸಿರಿಗೆ ಉಸಿರಾಗುವೆ ನಾನು

ಕನಸಿಗೆ ನೇಪಾವಗುವೆ ನಾನು

ನಿನ್ನ ಒಲವ ಹಾಡಗುವೆ ನಾನು

ನಿನ ಹೃದಯದಿ ಬೆರೆತೊಗುವೆ ನಾನು 


*************ರಚನೆ ***********

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ- ಭಾವಗೀತೆ ಸಂಕಲನ

ಸಂತೋಷವಾಗಿರಲು ಪ್ರಯತ್ನಿಸೋಣವೇ- ವ್ಯಕ್ತಿತ್ವ ವಿಕಸನ

Author biography of Chandrashekhar Channapura Halappa