ಕಾಲದ ಸುಳಿ
ಕಾಲವು ಹೇಳಿತು ಕಥೆ
ಒಂದೂ ಜೀವಿಯ ವ್ಯಥೇ
ಸುರಿಲ್ಲದ ಸೂರಿನ ರಾಣಿ
ನೋವೆ ಜೀವದ ಏಣಿ
ಮೊಗ್ಗು ಅರಳಿತು ಹೂವಾಗಿ
ಹೂವು ಬಾಡಿತು ಕಸವಾಗಿ
ಸಮಯ ಹೇಳಿತು ಸವಿಯ
ಕಾಲ ಕಾದಿತ್ತು ವಿಧಿಯ
ಕನಸು ನನಸಾಗೋ ಸಮಯ
ನನಸು ಬದುಕಿನ ವಿಸ್ಮಯ
ಸಾವಿರ ಸಾಲು ದಾರಿ ಎದುರು
ನಡೆವ ನಡಿಗೆಯೇ ತೊಡರು
ಕಣ್ಣಾರೆಪ್ಪೆಯೊಳಗೆ ಮಿಂಚಿತೆ ಕಾಲ
ಕಣ್ಣ ನೀರು ನೋವಿನ ಜಾಲ
ಸಮಯ ಹೇಳಿತೆ ಆಸೆಗೆ ಉತ್ತರ
ಕಾಲ ಬಂದಿತೆ ನೋಡುವ ಚಿತ್ತಾರ
ಕನಸಿನ ನಾಳೆ ಬಂದಿತೆ ಮತ್ತೆ
ಆಸೆಗೆ ಖುಷಿಯು ಸಿಕ್ಕಿತೆ
ನೋವಿಗೆ ಕೊನೆಯು ದಕ್ಕಿತೆ
ಕಾಲ ಚಕ್ರ ನನ್ನ ಮೇಲೆ ನೂಕಿತೆ
*********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment