ಮಸಣದ ಬದುಕು

 


ಮನಸು ಹೇಳುವ ಮುನ್ನ

ಮಸಣವಾಯಿತೇ ಬದುಕು

ನಿನ್ನ ಕೂಗುವ ಹೃದಯ

ಚೂರಾಯಿತೇ ಇಂದು


ನೇಸರನು ಕೆಂಪಾಗಿ ಕಾದಿಹಾನು

ದೇಹವನು ಸುಟ್ಟಿಹನು

ನಿನ್ನ ಆಸೆಯನು ಇಟ್ಟಿಹನು

ನೀನು ಇರದೇ ಇನ್ನ ಬದುಕು ಏನು  ಚೆನ್ನ


ಮಾತಿಲ್ಲದೆ ಹೋರಟೆ ಅಣೆಬರಹ ಗೊರಟೆ

ಯಾಕೀಗೆ ಜೀವನ

ಸುಡುತಿಹುದು ಕನಸಿನ ಮೌನ


ನಿನ್ನಾಸೆ ಬಿರುಗಾಳಿ

ಬಾಳ ಬರಿದು ಮಾಡಿರಲು

ಎಲ್ಲಿ ಹುಡುಕಲಿ ನಾ ನೀನೆಂಬ ತಂಗಾಳಿ

ದೇಹ ದಣಿದಿದೆ ತನುವು ಮಣಿದಿದೆ 


ಹುಡುಕುತ ನಿನ್ನ ಛಾಯೆ

ಬದುಕು ಮೂರು ದಿನದ ಮಾಯೆ

ಕನಸ ಕಂಬನಿ ಅಳುತಿರುವ ಇಬ್ಬನಿ

ಬಯಸಿದೆ ನಿನ್ನ ಮತ್ತೆ ಬಾ ಬಾಳಿನಲಿ



*********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35