ಕವನದ ಸಾಲು
ಬರೆಯುವ ಕವನ ಕಾಡಿತೇ ನನ್ನ
ಓದುಗರ ಮನಸ ಗೆಲ್ಲುವುದೇ ಇನ್ನ
ರುಚಿಸಲೇ ಇಲ್ಲ ಸಾಲುಗಳ ಪದವು
ಅಂತ್ಯಪ್ರಾಸ ಏಟುಕದ ಜ್ವರವು
ಬರೆಯಲು ಹೋರಟೆ ಪ್ರೀತಿ ಕಥೆಯ
ಮನವು ಹೇಳಿತು ಬೇಡವೋ ಗೆಳೆಯ
ನಸುಕಿನ ನಯನಕೆ ಸೋಲಿನ ರುಚಿ
ಪದಗಳ ಸಾಲು ಕೇಳಿತು ಶುಚಿ
ಹುಡುಕುತ ಹೊರಟೆ ಪದಗಳ ಸಾಲು
ಬರೆದ ಸಾಲು ನಗುವಿನ ಸೋಲು
ನನ್ನಯ ಬದುಕಲಿ ಕವನದ ಚಿತ್ತಾರ
ಹೊಳೆದ ಪದಗಳ ಪ್ರೀತಿಯ ಸಹಕಾರ
ಬರೆದ ಮೇಲೆ ಬೇಸರ ಏಕೆ
ನೆನಪಿಗೆ ಬಾರದು ಹಾರಿದ ನೌಕೆ
ಕಾರಣವಿಲ್ಲದೆ ಕಥೆ ಬಾರದು
ಪದಗಳ ಪುಂಜ ಹಿಡಿದಂತೆ ಹುಂಜ
ಯೋಚನೆಯಲ್ಲಿ ಗೀಚಿದೆ ಕವನ
ಪದಗಳ ಸಾಲು ಮನದಲಿ ಜನನ
ರುಚಿಸಿತೇ ವನಿತೆ ನಲ್ಮೆಯ ಕವಿತೆ
ಯಾರಿಗೆ ಬೇಕು ಈ ಪ್ರಾಸದ ಅಣತೆ
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment