ಬೆವರ ಹನಿ
ಕಷ್ಟದಿಂದ ಸುರಿವ ಬೆವರ
ಹನಿ ಮುತ್ತಾದೀತೇ
ಹಸಿವನ ಹೊಟ್ಟೆಗೆ
ಅನ್ನದ ತುತ್ತಾದಿತೇ
ಸೂರ್ಯನ ಕಿರಣ
ನನ್ನ ಸುಟ್ಟೋಡಿತೇ
ಸಂಜೆಯ ಒಳಗೆ ಕಷ್ಟದ
ಬಣ್ಣ ಕಪ್ಪಾದೀತೇ
ಮುಂಜಾನೆಯ ಮಂಜು
ನನ್ನ ತಬ್ಬಿತೆ
ತಂಗಾಳಿ ಚಳಿ ನೋಡಿ
ದೇಹ ಬೆಚ್ಚದೀತೇ
ಕೊಂಚ ಅನ್ನ ಹಸಿವ
ನಿಗಿ ಮನ ಕುಣಿಯಿತೇ
ಮಾಡಬೇಕು ಕಾಯಕ
ಕವಾ ನೀಡಿ ದೇಹಕ
ಶ್ರಮಿಸಿ ದಣಿಸಿ ದುಡಿಯಬೇಕು
ಒಪ್ಪೋತಿನ ಊಟಕ
ಬಡವನ ಬದುಕು ಬೆಳಕು
ಇರುಳಿನಂತೆ ತಳುಕು
ಹಗಲು ಕುಣಿದು ಬೆವರ ಸುರಿದು
ತೊಳೆಯಬೇಕು ಕೊಳಕು
ಗಂಜಿ ಅನ್ನ ಜೀವನದ ಅಮೃತ
ದೇವಾ ಕೊಟ್ಟ ಶಾಪವೇಕೋ ವಿಕೃತ
ಯಾರ ನಾನು ಬೈಯಲ್ಲಿ
ವಿಧಿಯನೇಕೆ ದೂರಲಿ
ಹುಟ್ಟಿದ ಜೀವ ನೋವ ನುಂಗಿ
ಆಸೆಯ ಗೋಪುರದಿ ಅರುಕು ಅಂಗಿ
ಇಟ್ಟಿಗಾಗಿ ದುಡಿಯುವೆ
ಹೂಟ್ಟೆಗಾಗಿ ಮಣಿಯುವೆ
ಕೆಲಸ ಕೊಟ್ಟ ದೇವರಿಗೆ
ಕೈ ಎತ್ತಿ ಮುಗಿಯುವೆ
ಸ್ನೇಹದಿಂದ ಸಲವುವರಿಗೆ
ಸಾವು ಕೂಡ ಪ್ರೀತಿ ಸಲುಗೆ
ಚೆಡಿಸಿ ಹೀಯಾಳಿಸುವವರಿಗೆ
ಜೀವ ಕೂಡ ಒಡೆದ ಮಡಕೆ
*******ರಚನೆ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment