ಶಿವಾಯ ನಮಃ
ಬೂಮಂಡಲವ ಸುತ್ತಿ
ಆಕಾಶವ ಬದಿ ಗೊತ್ತಿ
ಬೆಂಕಿಯ ಬರಸೆಳೆದು
ದರೆ ಹೊತ್ತಿಹುರಿವಾಗ
ಶಿವ ನೀನು ಬಲ್ಲೆಯ
ಯಾರಿಗೆ ಅಹುತಿ
ನಡೆಯಲಿ ಕೆಂಡ
ಮನವರಿಯದ ರುಂಡ
ಬದುಕು ಬೋರ್ಗರೆಯಲು
ಮನವು ಏಕೋ ಮಸಣ
ಬೂದಿ ಬಳಿದ ಅಘೋರಿಗೆ
ಶಿವನೇ ಪರಮ ಪ್ರಾಣ
ವೇಷದಲಿ ಶಿವನ ನಾಮ
ಬಂಗಿಯ ಒಲವೇ ಪ್ರೇಮ
ಈಶ್ವರನ ಜಫೀಸುತ
ಬಮ್ ಬಮ್ ಬೋಲೇ ಕೂಗುತಾ
ಮಸಣವೆ ಜೀವ ರಾಶಿ
ವಿಧಿ ಅರಸಿ ಮನ ಸಹಿಸಿ
ವಿಬೂತಿಯಲಿ ವರ ನೀಡಿ
ಶಿವನನ್ನೇ ಸ್ವೀಕರಿಸಿ ದೇವಾ
ಜೈ ಜೈ ಬಮ್ ಬಮ್ ಬೋಲೇ...,..
********ರಚನೆ **********
ಡಾ. ಚಂದ್ರಶೇಖರ ಸಿ. ಹೆಚ್
Comments
Post a Comment