ಪ್ರೀತಿ ಮಾತು
ಒಲವ ಮಾತು ಸಿಹಿಯಾತ್ತು
ನಿನ್ನ ಬೆಸುಗೆ ಬಿಸಿಯಾತ್ತು
ಹೆಸರು ಏಕೋ ಉಸಿರಾಯುತ್ತು
ಬಾರೆ ಒಮ್ಮೆ ಬಳಿಗೆ ನಕ್ಕು ನೀ
ಮೋಡವಿರದ ಬಾನಿನಲ್ಲಿ
ಪ್ರೀತಿ ಹನಿಯ ಮಳೆಯತ್ತು
ನೀರು ಇರದ ನದಿಯೊಂದು
ತುಂಬಿ ಬಂದು ಸೇರಿತಿಂದು
ತಿರುಗಿ ಒಮ್ಮೆ ನೋಡಬಾರದೇ
ಹುಣ್ಣಿಮ್ಮೆಯ ಬಾನಿನಲ್ಲಿ
ನಕ್ಷತ್ರಗಳ ಗೂಡಿನಲ್ಲಿ
ಚುಕ್ಕಿಗಳು ಚೆಲ್ಲಾಪಿಲ್ಲಿ
ಒಳೆವ ಚಂದ್ರನಂತೆ
ನೀನು ಒಮ್ಮೆ ಕಾಣಬರದೇ
ದಟ್ಟ ಅಡವಿಯ ಕಾಡಿನಲ್ಲಿ
ಚಿಗುರಿದ ವಸಂತಮಾಸ
ಮರದಿ ಕೂತ ಕೋಗಿಲೆಯೇ
ಒಮ್ಮೆ ನೀನು ಹಾಡಬಾರದೆ
ಬಂಡೆ ಮೇಲೆ ಹರಿವ ನೀರು
ಸಾಗಿದಂಗೆ ಒಲವ ತೇರು
ಮುಂದೆ ನಗುತಾ ಹೋಡುವಾಗ
ಜಾರಿ ನನ್ನ ಒಮ್ಮೆ ಸೇರಬಾರದೆ
ಮನದಿ ಪ್ರೀತಿ ಹುಟ್ಟಿ
ಒಲವ ಬೆಸುಗೆ ಕದವ ತಟ್ಟಿ
ನಿನ್ನ ಕರೆದು ಕೂಗುವಾಗ
ಲವ್ ಯು ಎಂದು ಹೇಳಬಾರದೆ
********ರಚನೆ *********-
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment