ಕನಸಿನ ತೇರು
ನಸುನಗುವ ಮಾತಿಗೆ ನಿನಾದೆ ಬೇಜಾರು
ಜೀವನದಿ ನೋವುಗಳು ಸಾವಿರಾರು
ಯಾರಿಗೆ ಹೇಳಲಿ ನನ್ನ ಬದುಕಿನ ಬಣ್ಣ
ನೀರಾಗಿ ಹರಿಯುತಿದೆ ನೋವಿನ ಕಣ್ಣ
ಮನಸುಗಳ ನಡುವೆ ಪ್ರೀತಿಯ ತಿಕ್ಕಾಟ
ಕಲೆತ ಹೃದಯಗಳ ನಡುವೆ ಕಿತ್ತಾಟ
ಕಟ್ಟಿದ ಕನಸು ಪುಡಿಯಾಯಿತೇ
ನೋವಲಿ ಮನಸ್ಸು ಚೂರಾಯಿತೇ
ಜೇವನ ಅರ್ಥವಾಗುವ ಒಳಗೆ ವಂಚೂರು
ಬದುಕಿನ ಮಳಿಗೆ ಸೋರುವ ಸೂರು
ನನ್ನ ಕಣ್ಣೀರ ಒರೆಸುವರ್ಯಾರು
ಯಾರಿಗೆ ನೀಡಲಿ ನಾ ದಿನ ದೂರು
ಮರೆಯದ ಯಾತನೆಯಲ್ಲಿ ಸಾಗಿದೆ ಜೀವನ
ನಗುವ ಕನಿಸಿಗೆ ಹಾಕಿದೆ ಬೇಲಿಯನ
ನಾನೇಗೆ ಬಾಳಲಿ ಈ ಬಣ್ಣದ ತೆರಲಿ
ಹೇಗೆ ಕಾಲವ ದೂಡಲಿ ಈ ಗುಬ್ಬಚ್ಚಿ ಗೂಡಲಿ
ಕನಸುಗಳ ಗರಿ ಬಿಚ್ಚಿ ಆಕಾಶಕ್ಕೆ ಹಾರಲೆ
ನೋವಿನ ಸುಳಿಯಲಿ ಕೂರಲೇ ಸೂರಲಿ
ಮನಬಿಚ್ಚಿ ಕುಣಿಯಲೇ ಚಿಟ ಪಟ ಮಳೆಯಲಿ
ಯಾರಿಗೂ ಇಲ್ಲದ ಈ ಬಣ್ಣ ಮಾಸಿದೆ ಏಕೋ ಕೆಸರಲಿ
*******ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment