ಅಲೆಮಾರಿ ನಾ
ಗುರಿಯಿಲ್ಲದ ಅಲೆಮಾರಿ ನಾ
ನಡೆದ ದಾರಿ ಕಲ್ಲು ಮುಳ್ಳಿನಾ
ಎಳುಬಿಳಿನ ಜೀವನವೇ
ಮುಗಿಯದ ಯಾತನೆಯಲ್ಲಿ
ಈ ಬದುಕಿನ ಪಯಣ
ನೂವುಂಟು ನೂರಾರು
ಮನಸು ಮಸಣದೂರು
ಸೆಳೆವಾಗ ಜೀವನದ ಸುಳಿ
ಅರಿವೇ ಇಲ್ಲದ ಮನಗುಳಿ
ಸಾಗು ಸಾಗುತ ಪಯಣ ಬೇಸರ
ಕಾಲು ದಾರೀಲಿ ಜೀವನ ಸಂಹಾರ
ಸೋಲು ಎಂಬ ಈ ಉಪಹಾರ
ಸುಟ್ಟಿತೆ ನನ್ನ ಜೀವ ಕೈಯಾರ
ನೆಮ್ಮದಿ ಜೀವನದ ಗಂಟು
ಆಸೆಗಳು ಬದುಕಲಿ ನೂರೆಂಟು
ಗುರಿಯಿಲ್ಲದ ಅಲೆಮಾರಿ ನಾ
ನೋವಿನ ಅಲೆಯಲ್ಲಿ ಬದುಕುಳಿದೆ ನಾ
***********ರಚನೆ ********
ಡಾ.ಚಂದ್ರಶೇಖರ. ಸಿ. ಹೆಚ್
Comments
Post a Comment