ನೆನೆದು ನಿನ್ನ



ನಾ ನೆನೆದು ನೆನೆದು ನಿನ್ನ

ಹೇಗೆ ಮರೆಯಲಿ ಇನ್ನ

ಮರೆತು ಹೋಗೋ ಮನಕೆ

ನೆನಪು ಒಂದೂ ಬಯಕೆ


ಕಾಡುತ್ತಿರುವ ಒಲವ ಹಸಿವು

ಸುಡುತಿದೆ ವಯಸ್ಸ ತನುವು

ಬಯಸುತಿದೆ ಸನಿಹ ಮನವು

ಏಕೆ ಹೀಗೆ ಕಾಡೋ ಚೆಲುವು


ಹೃದಯ ಕೊಂದು ರಕ್ತ ಬೆಂದು

ಕನಸ ತಿಂದು ಒಲವು ಬಂದು

ಮೌನವೇಕೋ ಮರೆಯಾಗಿದೆ

ಮಾತಾ ನುಡಿಯು ಬಾರದಾಗಿದೆ


ನಿನ್ನ ನೆನೆದ ದಾರಿಯಲ್ಲಿ

ನೋವ ಮುಳ್ಳು ಬಂದು ಚೆಲ್ಲಿ

ದಾರಿ ನೋವು ನೀಡಿದೆ

ಪ್ರೀತಿ ಮರೆತು ಕನಸ ತೊರೆದು

ಕಣ್ಣ ಹನಿಯು ಸುರಿದಿದೆ



ಯಾರಿಗಾಗಿ ಪ್ರೀತಿ ಮೋಹ ಮನದಲ್ಲಿ ನಂಬಿಕೆ ದ್ರೋಹ

ಏಕೋ ಮನೆಯ ಮಾಡಿದೆ

ಕಾಣದ ತೀರ ಕೈ ಬಿಸಿ ಕರೆದಿದೆ



***********ರಚನೆ ******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa