ಬದುಕು ಬಣ್ಣ
ಬದುಕೊಂದು ಒಲವಿನ ಬಣ್ಣ
ನೋವೊಂದು ಕಾಡಿದೆ ನನ್ನ
ಬಣ್ಣದಲ್ಲಿ ಕಳೆದೋಯ್ತು ಜೀವನ
ರಂಗು ರಂಗದ ಒಲವಿನ ಕಥನ
ಕಥೆ ನೂರು ಹೇಳಿದೆ ನೋವ ಚೂರು
ಮನಸೆಕೋ ಏಳಿದೆ ಪ್ರೀತಿ ಬೇರು
ಯಾರಿಗೆ ಹೇಳಲಿ ಕನಸ ಕಾರು ಬಾರು
ಕೇಳೋರು ಯಾರು ನನ್ನ ತೊಡರು
ಜೇವನದ ಕಥೆಗೆಲ್ಲಿದೆ ಮುಕ್ತಿ
ಕೊಡು ದೇವಾ ಎದರಿಸುವ ಶಕ್ತಿ
ನಿನ್ನ ನೆನೆವ ಪೂಜೆಯೇ ಭಕ್ತಿ
ಮೋಸವನು ಭೇದಿಸುವ ಯುಕ್ತಿ
ನೊಂದ ಮನವು ಯಾಕೋ ಕಾಡಿದೆ
ನನ್ನ ಒಲವ ಪ್ರೀತಿಯ ಬೇಡಿದೆ
ನಿನಗಾಗಿ ನನ್ನ ಬದುಕು ಮರುಗಿದೆ
ಏನೋ ನನ್ನರಿವ ಮಾಯೆ ಕರಗಿದೆ
ಹಗಲು ಕಳೆದು ಬೆಳಕು ಮುಗಿದು
ರಾತ್ರಿ ಸರಿದು ನಗುವ ಮೊಗವ ತೋರಿದೆ
ನಿನ್ನ ಕಂಡ ಹೃದಯ ಏಕೋ ಬಡಿದಿದೆ
ಪ್ರೀತಿ ತೇರು ಮನವ ಮುಟ್ಟಿ ಕರೆದಿದೆ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment