ಹೋತ್ತಿದೆ ಕಿಡಿ

 



ಮನಸು ಮನಸುಗಳ ನಡುವೆ ಕಿಡಿ

ಬದುಕಿನ ಪಯಣವೇ ಸ್ವಲ್ಪ ತಡಿ

ಸುನಾಮಿಯ ಅಲೆಗಳೇ ದಡಕೆ ಬಡಿ

ಪ್ರೀತಿಯ ಹೃದಯಗಳಿಗೆ ಈಗೇಕೆ ಚಡಿ


ಯಾರದೋ ಬೇಗೆಗೆ ಬಯಲಾಯ್ತು ಬದುಕು

ಕನಸು ಕಂಡ ಮನಸುಗಳ ನಡುವೆ ಬಿರುಕು

ಕಂಬನಿ ಎಂಬಾ ಕಣ್ಣೀರ ಚುರುಕು

ಪ್ರೀತಿ ಮನಸ್ಸುಗಳ ಸೇತುವೆ ಮುರುಕು


ನಡೆದೊಷ್ಟು ದೂರ ನೋವಿನ ತೀರ

ಮರೆಯಲಿ ಎಗೆ ಒಲವ ನೆನಪಿನ ಭಾರ

ಪ್ರೀತಿ ಸಮುದ್ರದಲ್ಲಿ ನಿನ್ನಯ ಗೋಪುರ

ಕಂಡ ಕಂಡೊನೆಯೇ ಚೂರಾಯ್ತು ಒಲವ ಗೋಪುರ


ಕನಸು ಕಾಣಲು ಮನಸಿಲ್ಲ ನನಗೆ

ಹೋತ್ತಿದ ಕಿಡಿಗೇ ಹುರಿದೋಯ್ತೆ ಬದುಕು ಕೊನೆಗೆ

ಯಾಕೋ ಭಾರ ಜೀವನದ ನಡಿಗೆ

ಮನಸಿಗೆ ಸಾಕಾಯ್ತು ಜೀವವೇ ಕೊನೆಗೆ



********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್t

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20