ಮಕರ ಸಂಕ್ರಾಂತಿ
ಸಡಗರದ ಸಂಕ್ರಾಂತಿ
ತರದಿರಲಿ ಮತಿ ಬ್ರಾಂತಿ
ನಡೆಯಲಿ ಸುಗ್ಗಿ ಕ್ರಾಂತಿ
ರೈತರ ಜೇವನವು ಶಾಂತಿ
ರಾಗಿಯ ಬೆಳೆ ಬಂತು
ಅನ್ನದ ಸಿರಿ ತಂತು
ಸುಗ್ಗಿಯ ಸವಿಯೋ
ಸುಖದ ಶಾಂತಿಯೋ
ಕಣದ ಬದುಕು
ಕಷ್ಟಗಳ ಸವೆದು
ಬರವನ್ನು ನಿಗಿ
ಜೋಳಿಗೆ ತುಂಬಿತು ಜೋಗಿ
ಹಸನದ ಜೀವನ
ವ್ಯಸನವ ನೂಕಿ
ಬಾಳಿನಲ್ಲಿ ಸಿಹಿ
ಎಳ್ಳು ಬೆಲ್ಲವ ಹಾಕಿ
ಹಾಡೋಣ ನಾವು
ಸಂಕ್ರಾಂತಿ ಬಂತು
ಕುಣಿಯೋಣ ನಾವು
ಮನೆಮಂದಿ ನಿಂತು
*********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment