ನನ್ನ ಸಿನಿಮಾ
ಹೃದಯವೇಕೋ ಮಿಡಿಯುತಿದೆ
ನಿನ್ನ ಅಸೆ ಹೊತ್ತು
ನಾನು ಹೇಗೆ ಜೀವಿಸಲಿ
ನನ್ನ ಕನಸ ಕಿತ್ತು
ಮನುವು ಹಾಗೇ ಹೇಳುತಿದೆ
ನೀನು ತುಂಬಾ ಚೆಂದ
ಮತ್ತೆ ಹೇಗೆ ವರ್ಣಿಸಲಿ ನಿನ್ನ ಅಂದ
ಮಾತು ಏಕೋ ಮೌನವಾಯುತು
ನುಡಿಯು ಹಾಗೇ ಕವನವಯ್ತು
ಕವನವೀಗ ಚೆಂದ ಹಾಡಯ್ತು
ಹಾಡಿಗೆ ನಾವು ಕುಣಿಯೋಣವೆ
ಕುಣಿದ ಹೆಜ್ಜೆ ನಾಟ್ಯವಾಯ್ತು
ನಾಟ್ಯ ಹಾಗೇ ಮನಸ ಕದ್ದಯ್ತು
ನನ್ನ ಸಿನಿಮಾ ನಟಿಯದೆ
ನಾನು ನಿನ್ನ ಪ್ರೀತಿ ನಟನಾದೆ
ಯಾರು ಜೀವನದ ಸಿನಿಮಾ ಕೇಡಿ
ಕಳಿಸಹನು ದೇವರು ನೋಡಿ
ಒಮ್ಮೆ ನನಗೆ ತಿಳಿಯಬಾರದೆ
ನಕ್ಕು ನೀನು ನಲಿಯುವಾಗ
ತಿರುಗಿ ಒಮ್ಮೆ ನೋಡಬಾರದೇ
ನನ್ನ ಜೀವನದಿ ನನ್ನ
ಸಿನಿಮಾ ಹೀರೋ ನಾನೇ
ಬಯಸಿ ತಂದ ಚೆಂದದ ನಟಿ ನೀನೇ
ನಡೆಯುತಯ್ತಿ ನಮ್ಮ ಸಿನಿಮಾ
ದೇವಾ ಕೊಟ್ಟ ಕತೆಯಲಿ
ಚಿತ್ರವೀಗ ಚಲಿಸುತಿಹದು
ಬ್ರಹ್ಮ ಬರೆದ ವಿಧಿಯಲ್ಲಿ
ಸಿನಿಮಾ ಅಂತ್ಯ ಸಾಗುವುದು
ಮೋಡ ಕವಿದ ಮನೆಯಲಿ
********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment