ಮಸಣದ ತೇರು

 


ಮಸಣದ ತೇರು ನೋಡಿರೋ ಅಣ್ಣ

ವಿಧಿಯಟಾದಂತೆ ಬದುಕಿನ ಬಣ್ಣ

ನೀಡಿಲ್ಲ ಸುಳಿವು ಈಗೇಕೆ ಅಳಿವು

ಕಂಡ ಕನಸಿಗೆ ಬಂದೈತಿ ಬರವು


ನನ್ನಯ ಭಕ್ತಿ ನನ್ನ ಕಾಯಲಿಲ್ಲ

ಆಸೆಯ ಬುತ್ತಿ ನಾನು ಹೊತ್ತು ವಯ್ಯಾಲಿಲ್ಲ

ಸುಡುಗಾಡು ಏಕೋ ಕೈ ಬಿಸಿ ಕರೆಯಿತ್ತಲ್ಲಾ

ಕಣ್ಣ ಮುಚ್ಚಿ ಬಿಡೋವೊಳಗೆ ಜೀವ ಹಾರಿತಲ್ಲಾ


ಜೀವನವು ನಡೆವಾಗ ಬದುಕು ಎಷ್ಟು ಚೆನ್ನ

ಜೀವವ ಬಿಡುವಾಗ ಕೊನೆಉಸಿರೇ ಕನ್ನ

ಬಾಳ ದಾರಿಯಲಿ ಬೆಂದ ಹೃದಯವೇ ಕೇಳು

ಮನಸು ಮಿಡಿದೈತೆ ನೋವಿನ ಗೋಳು


ಸ್ಮಶಾನದಲ್ಲಿ ಮಣ್ಣಲಿ ಮಣ್ಣಾಗೋ ದೇಹ

ಹಣೆಬರಹ ಬರೆದವನಿಗೆ ಹೊತ್ತಯೋ ಮೋಹ

ಕಾಣದ ಲೋಕವು ಕೈ ಬಿಸಿ ಕರೆದಂತೆ

ಮಸಣದ ತೇರು ನನ್ನವರು ಎಳೆದಂತೆ


ಮಸಣದ ತೇರು ನೋಡಿರೋ ಅಣ್ಣ

ವಿಧಿಯಟದಲ್ಲಿ ಮಾಸಿತು ಬದುಕಿನ ಬಣ್ಣ



************ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Post a Comment

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ