Posts

Showing posts from March, 2021

🌴🌴ಕೊರೊನ ವೈರಸ್🌴🌴

ದೇಶ ದೇಶಗಳ ನಡುವೆ ಮುಸುಕಿನ ಗುದ್ದಾಟ  ಹಣದ ಇಂದೇ ಬಿದ್ದ ಮದಗಜಗಳ ಜಗ್ಗಾಟ  ನಾ ಮುಂದೆ ತಾ ಮುಂದೆ ಎಂದು ಮಾಡುತ ವಂಚೂ  ಜನಿಸಿತು ಒಂದೂ ಕಿಲ್ಲರ್ ವೈರಸ್  ಅದರ ಹೆಸರೇ ಕೊರೊನ ವೈರಸ್ ವೈರಸ್ ಹಬ್ಬಿತು ಜಗತ್ತಿನ ಎಲ್ಲೆಡೆ  ಊಸಿರನೇ ನಿಲ್ಲಿಸುವ ಸಂಚು ಒಂದೆಡೆ  ವೈರಸ್ ಇಂದ ಸತ್ತರು ಜನರು  ಸತ್ತವರ ಅಣೆಬರಹ ಯಾರು ಬಲ್ಲರು  ಕಾರೋನ ವೆಂಬ ಮಾರಿಯ ಬಲೆಗೆ ಪ್ರಪಂಚವೇ ತತ್ತರ  ಭಾರತ ಕೊಟ್ಟಿತು ಈ ವೈರಸ್ ಗೆ ದೀಪ ಬೆಳಕಿನ ಉತ್ತರ  ಕಾರೋನವೆಂಬ ವೈರಸ್ ಮಾರಿಗೆ ಸಾವೇ ಇಲ್ಲ  ವಿಜ್ಞಾನಿಗಳು ಹುಡುಕುತ ಕುಳಿತರು ಓಷಧವನ್ನೆಲ್ಲ  ಸಿಗುವುದೇ ಓಷಧಿ ಹೊರಡಲು ಕೊರೊನ ವಿರುದ್ಧ  ಕಂಡು ಇಡಿದ ವಿಜ್ಞಾನಿಗೆ ಬಹುಮಾನವೂ ಸಿದ್ದ  ವೈರಸ್ ಎಂಬ ಕಾಣದ ಜೀವಿಯು  ಜಗತ್ತಿನೆಲ್ಲೆಡೆ ಮಾಡಿತು ಮೋಡಿಯೂ  ಕೊರೊನ ವೈರಸ್ ಹುಟ್ಟಿದ ಊರು  ಸಾವಿರ ವೈರಸ್ ಗಳ  ತವರು  ದೇಶ ದೇಶಗಳ ನಡುವೆ ಆರ್ಥಿಕ ಸಮರ  ಮನುಶ್ಯನ ಜೀವನವೇ ಒಂದೂ ಕಳೇಬರಹ  ***********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್

💃💃ಡಿಂಪಲ್ ಕೆನ್ನೆ 💃💃

 ಡಿಂಪಲ್ ಕೆನ್ನೆಯ ಹುಡುಗಿ                         ಕಣ್ಣ ಸನ್ನೆಯ ಬೆಡಗಿ  ನಿನ ನೋಟ ಬಲು ಚೆಂದ                          ಪದವಿಲ್ಲ ಬಣ್ಣಿಸಲು ನಿನ್ನ ಅಂದ  ಆ ನಿನ್ನ ಮೈಮಾಟ ಬಳುಕುವ                           ಬಳ್ಳಿಯ ತೆನೆಯಾಟ  ನಿನ ನಡುಗೆ ಸೂಗಸಂತೆ                            ಹೂವೊಂದು ನೆಲದಲ್ಲಿ ಬಿದ್ದಂತೆ  ಆ ನಿನ್ನ ವೈಯಾರ ನೋಡುತ                            ನಿಂತ ರಾಜಕುಮಾರ  ನಿನ ಮಾತು ಮುತ್ತಂತೆ                             ಜೇನಿನ ಸಿಹಿಯಂತೆ  ಸೌಂದರ್ಯದ ಗಣಿ ನೀನು                              ಗುಣದಲ್ಲಿ ನೀರಿನಲ್ಲಿನ ಮೀನು  ನಡತ...

👸👸ನಕ್ಷತ್ರ ನಗುತಿರಲು 👸👸

 ಬರಗಾಲದಂತೆ ಬರಿದಾದ ಮನಸ್ಸು  ಒಲವಿಲ್ಲದ ಹೃದಯಕೆ ಚೆಲುವೆಂಬ ಕನಸ್ಸು  ನೀ ದೂರ ನಿಂತಿರಲು ನನಗಾಯಿತು ಮುನಿಸು  ನೀ ಬಳಿ ಇರಲು ಜೀವನವೇ ಸೂಗಸು  ಮನಸ್ಸಲಿ ನೀ ಬಂದೆ ಕನಸ್ಸನ್ನು ನೀ ತಂದೆ  ಖುಷಿಯಿಂದ ನಾವಿರಲು ಸ್ವರ್ಗವೇ ತೆರೆದಂತೆ  ಹೋಗುವೆ ನೀ ದೂರ ನನಗೇಕೆ ಈ ಬಾರ  ನಿನ್ನಿಂದ ನಾ ಬರಲು ನಕ್ಷತ್ರ ನಗುತಿರಲು  ಜೀವನವೇ ಒಂದೂ ಚಿತ್ತಾರ  ***************ರಚನೆ ************** ಡಾ. ಚಂದ್ರಶೇಖರ. ಸಿ. ಹೆಚ್ 

🌳🌳ಸೆರೆಯಾದೆ ನಾನು 🌳🌳

 ಈ ಪಯಣದಿ ನೀ ಜೊತೆಯಾದೆ  ನನ ಬಾಳಿಗೆ ನೀ ಸಖಿಯಾದೆ  ನಿನ್ನಯ ಪ್ರೀತಿಗೆ ನಾ ಮೂಖನಾದೆ  ಆ ನಿನ್ನ ಮಾತಿಗೆ ನಾ ಸೋತೋದೆ  ಸಿಡಿಲಂತೆ ಬಂದ ಈ ಪ್ರೀತಿ  ಮಿಂಚಂತೆ ಆಗಸದಿ ಬಂದೈತಿ  ಮಳೆ ಹನಿಯು ಸುರಿದು  ಆ ಹನಿಯಲ್ಲಿ ತೋಯ್ದು   ಭೂಮಿಗೆ ತಂಪು ನಿಡೈತಿ  ನೀ ನನಗಾಗಿ ತಂದ ಈ ಪ್ರೀತಿ  ಮಾತೆಲ್ಲ ಮುತ್ತಂತೆ  ನೋಟವು ಕಾಮನಬಿಲ್ಲಂತೆ  ಬಣ್ಣಗಳು ಆಕಾಶದಿ ಮೂಡಿ  ಆ ಮೊಡವೆ ತಿಳಿ ನೀಲಿ  ಮಳೆ ಹನಿಯು ಬಿದ್ದಂಗೆ ಮನದಲ್ಲಿ  ನಿನ್ನ ಗೆಜ್ಜೆಯ ಸದ್ದು ಬಾಳಲಿ  ನಕ್ಷತ್ರದಂತೆ ಆ ನಿನ್ನ ನೋಟ  ಸೆರೆಯಾದೆ ನಾನು ಆ ನಿನ್ನ ತುಂಟ ಕಣ್ಣಾಟ  ***********ರಚನೆ ************ ಡಾ. ಚಂದ್ರಶೇಖರ. ಸಿ. ಹೆಚ್ 

🌺🥀ಒಂದು ಹುಡುಗಿಯ ಕಥೆ 🥀🌺

ನಗುವಿನ ಮೊಗದ ಚೆಲುವನೇ ನೀನು  ಸುಂದರ ಹುಡುಗಿಯ ನೋಡಲೇ ನಾನು  ಅವನು ನಕ್ಕನು ಹುಡುಗಿಯ ನೋಡಿ  ಹುಡುಗಿ ಆದಳು ಇವನಿಗೆ ಜೋಡಿ  ಅವನಿಗಾಗಿ ಮುಡಿದಳು ಮಲ್ಲಿಗೆ ಹೂವು  ಅವನು ಕೊಟ್ಟನು ಆಕೆಯ ಜೀವನದಿ ನೋವು  ಕಣ್ಣಲಿ ಹೊಳಪು ಹಾಲಿನ ಬಿಳುಪು  ಸೋತನು ಅವನು ನೋಡಿ ಚೆಲುವಿನ ಬಿಳಿಪು  ಮನದಲಿ ಮಿಡಿತ ಹೃದಯದಿ ತುಡಿತ  ಅವನ ಮೋಸಕೆ ನೋವಿನ ಪ್ರೀತಿ ಖಚಿತ  ಅವನ ನೋಟ ಆಕೆಗೆ ಕಲಿಸಿತು ಪಾಠ  ಜೀವನದಲ್ಲಿ ತಿಳಿದಳು ನಿಜವಾ  ಅವನು ಮಾಡಿದ ಮೋಸದ ಒಲವ  ಹುಡುಗಿ ಎತ್ತಳು  ಒಂದೂ ಮಗುವ  ಬೀದಿಯಲ್ಲಿ ಬಿಟ್ಟಳು ತಬ್ಬಲಿ ಮಾಡಿ ಮಗುವ  ನೋವಿನ ತೇರು ಬಿಟ್ಟಳು ಊರು  ದೂರದ ಊರಲಿ ಸಿಕ್ಕಿತು ಸೂರು  ಆ ಸೂರಲಿ ಕಂಡಳು ನೋವಿನ ಬದುಕು  ದೇವರು ಕೊಟ್ಟನು ನೆಮ್ಮದಿ ಬದುಕು  ಜೀವನವೆಂಬುದು ಅರಿಯದ ಮಾಯೆ  ಬದುಕಲು ಕಲಿತಳು ಮರೆತು ನೋವಿನ ಛಾಯೆ  ಹೇಳಿದೆ ನಾನು ಹುಡಿಗಿಯ ಕಥೆಯ  ನೊಂದು ಬೆಂದ ಜೀವನದ ವ್ಯಥೆಯ  **********ರಚನೆ *********** ಡಾ ಚಂದ್ರಶೇಖರ. ಸಿ. ಹೆಚ್

🌈🌈ರಂಗೋಲಿ 🌺🌺

 ಮುಂಜಾನೆ ನಾ ಬಂದೆ ರಂಗೋಲಿ ನೀ ತಂದೆ  ರಂಗೋಲಿ ನೀ ಬಿಡಲು ರಂಗಾಯಿತು ಮನಸ್ಸೆಲ್ಲ  ಮನಸ್ಸೆಂಬ ಮನೆಗೆ ಕಾಲಿಟ್ಟೆ ಹೃದಯಕ್ಕೆ  ಹೃದಯದ ಗೂಡಿನ ಬಡಿತವೇ ನೀನಾದೆ  ಪ್ರೀತಿಯಲಿ ನಾ ಮುಳುಗಿ ನೀನ್ನ ಗುಂಗಲ್ಲಿ ತೇಲೋಗಿ  ನಿನ್ನಿಂದೆ ನಾ ಬರಲು ನೀ ಹೊರಟೆ ಹಾಯಾಗಿ  ಮುಂಜಾನೆ ನಾ ಬಂದೆ ರಂಗೋಲಿ ನೀ ತಂದೆ  ರಂಗೋಲಿ ನೀ ಬಿಡಲು ಚೂರಾಯ್ತು ಮನಸೆಲ್ಲ  ರಂಗೋಲಿ ನೀ ಬಿಟ್ಟೆ ನೀ ನನಗೆ ಕೈ ಕೊಟ್ಟೆ  ಮತೊಬ್ಬನ ಸತಿಯಾದೆ ನನ್ನಿಂದ ದೂರದೇ  ಮನಸ್ಸೆಲ್ಲ ಚೂರಾಯ್ತು ಹೃದಯವೇ ಕಲ್ಲಾಯಿತು  ಕಲ್ಲನ್ನು ಕೈ ಹಿಡಿದ ಹುಡುಗಿಯು ಬಂದಾಗ  ಬಾಳಲ್ಲಿ ಬಂದ ಹೊಸ ಪ್ರೀತಿಯ ಕಂಡಾಗ  ರಂಗೋಲಿ ನೆನಪಾಯ್ತು ಕನಸ್ಸೆಲ್ಲ ನಾನಸ್ಸಯ್ತು  ಮುಂಜಾನೆ ನೀ  ಬಂದೆ ರಂಗೋಲಿ ನೀ ತಂದೆ  ರಂಗೋಲಿ ನೀ ಬಿಡಲು ರಂಗಾಯಿತು ಮನಸ್ಸೆಲ್ಲ  *************ರಚನೆ ****-**-***** ಡಾ. ಚಂದ್ರಶೇಖರ. ಸಿ. ಹೆಚ್ 

🏩🏨ಮಮತೆಯ ಮಡಿಲು 🏩🏣

 ಮಮತೆಯ ಮಡಿಲಲಿ                       ಮೌನಿಯು ನಾನಾದೆ  ನಿನ್ನಯ ಪ್ರೀತಿಗೆ                       ಸೋತು ಶರಣಾದೆ  ನಿನ್ನಯ ಮಾತು                        ಒಲವಿನ ಮುತ್ತು  ಪ್ರೀತಿಯ ಮಳೆಯಲ್ಲಿ                        ನಾನು ನೆನೆದಂತಾಯಿತು  ಹರಿಯುವ ನೀರು                        ಸೇರಿತು ನದಿಗೆ  ನನ್ನಯ ಬದುಕು                        ಬಲೆಯಲ್ಲಿ ಬಿದ್ದ ಮೀನಿನ ಹಾಗೆ  ಪ್ರೀತಿಯ ಮೀನು                         ಸೇರಿತು ಧಡವ  ತೋರಿತು ಮೀನು ಮತ್ತೆ                          ನೀರಿಗೆ ಬೀಳುವ ಚಲವ  ನೀರಿಗೆ ಬಿದ್ದ ಮೀನಿನ ಹಾಗೆ  ...

🌄🌅ಕುಂದಾದ್ರಿ ಬೆಟ್ಟ 🌅🌅

 ಮುಂಜಾನೆ ಬಲು ಚೆಂದ                     ನೋಡಲು ಸೂರ್ಯನ ಅಂದ  ಮಂಜು ತುಂಬಿದ ಬೆಟ್ಟ                    ನೋಡಲು ಚೆಂದ ನೋಡ  ಬೆಟ್ಟದ ಮೇಲಿಂದ                    ನೋಡುಬಾರ ಸೂರ್ಯಾನಂದ  ಕುಂದಾದ್ರಿ ಸ್ವರ್ಗ ನೋಡ                    ನೋವನ್ನು ಮರೆತು ಹಾಡ  ಬೆಟ್ಟಗಳ ಸಾಲು ಸಾಲು                    ನೋಡು ಮರೆತು ಎಳು ಬೀಳು  ಕೆಂಪಾದ ಸೂರ್ಯ ಬಂದ                    ನಾಡಿಗೆ ಬೆಳಕು ತಂದ  ಸೂರ್ಯನ ಕಿರಣ ಬರಲು                    ನೀಲಿಯಾತು ಮೊಡವೆಲ್ಲ  ಮಂಜು ಕವಿದ ಬೆಟ್ಟ                    ನಿಮಿಷದಲ್ಲಿ ಹಸಿರಯ್ತಲ್ಲ  ಕುಂದಾದ್ರಿ ಬೆಟ್ಟ ನೋಡ                    ನೋವನ್ನು ಮರೆತು ಹಾಡ...

🌴🌴ಕವಿತೆ 🌳🌳

 ಮನಸ್ಸಿನ ಹಾಳಾದಿ  ನಲುಮೆಯ ಕವಿತೆ  ಪ್ರೀತಿಯ ನೆನಪಲ್ಲಿ ಚಿಗುರೋಡೆದ ಕವಿತೆ  ನಲುಮೆಯ ಜೀವಕೆ ನೀರೆರದ ಕವಿತೆ  ಆಕಾಶದ ಎತ್ತರಕೆ ಏರುವ ಕವಿತೆ  ಜೀವನ ಪಾಠ ಕಲಿಸಿದ ಕವಿತೆ  ನೋವಲು ಧೈರ್ಯವ ಹೇಳಿದ ಕವಿತೆ  ಮನಸ್ಸಲಿ ಮೂಡಿದ ಮುಂಗಾರಿನ ಕವಿತೆ  ಪ್ರೇಮದ  ಬಣ್ಣದ ಒಲವಿನ ಕವಿತೆ  ಪ್ರೀತಿಸುವ ಹೃದಯಕೆ ತಂಪೆರದ ಕವಿತೆ  ಇದುವೇ ನನ್ನಯ ಮನದಲಿ ಅರಳಿದ ಕವಿತೆ  ***********ರಚನೆ ************* ಡಾ. ಚಂದ್ರಶೇಖರ. ಸಿ. ಹೆಚ್ 

🐲🐋ನೋಡುವಾಸೆ 🐋🐲

 ಮಾತು ಬಾರದಾಗಿದೆ                     ಮೌನವೇ ಮಾತಾಗಿದೆ  ನಿನ್ನ ನೋಡುವಾಸೆಯಾಗಿದೆ                    ಕಣ್ಣೆರಡು ಕುರುಡಾಗಿದೆ  ಹೃದಯ ಬರಿದಾಗಿದೆ                   ಎದೆಯ ಬಡಿತ ನಿಂತೋಗಿದೆ  ಪ್ರೀತಿ ಮಾಡುವಾಸೆಯಾಗಿದೆ                    ಪ್ರೀತಿಯ ಮೊರೆತ ನಿಂತೋಗಿದೆ  ಕನಸು ಕಾಣುವಾಸೆಯಾಗಿದೆ                     ಕನಸು ನನಸಾಗದೇ ಹೋಗಿದೆ  ನಿನ್ನ ಸೆಳೆತಕೆ  ಸಿಕ್ಕ ನನ್ನ                     ಜೀವನವೇ ಚೂರಾಗಿದೆ  **********ರಚನೆ ***-***** ಡಾ. ಚಂದ್ರಶೇಖರ. ಸಿ. ಹೆಚ್ 

🍂🍂ಹೃದಯದ ಮಾತು 🍂🍂

 ಹೃದಯದ ಮಾತನು ಕವಿತೆಯ ಮಾಡುವೆ  ನಿನ್ನಯ ಒಲವಲಿ ನಾನೆ ತೆಲುವೆ  ಕಣ್ಣಿನ ನೋಟಕೆ ಮನದಲ್ಲಿ ಸೋಲುವೆ  ನಿನ್ನಯ ನೆನಪಲ್ಲಿ ಗೂಡನು ಕಟ್ಟುವೆ  ನನ್ನಯ ಮನದಲ್ಲಿ ಜಾಗವ ನೀಡುವೆ  ಸ್ಪರ್ಶಿಸು ನೀನು ಸೋಲುವೆ ನಾನು  ಮನಸ್ಸನು ಕದ್ದ ಚೆಲುವೆಯೇ ನೀನು  ************ರಚನೆ ******* ಡಾ. ಚಂದ್ರಶೇಖರ. ಸಿ. ಹೆಚ್ 

🥀🥀ಬರಿದಾದ ಮನಕೆ 🥀🥀

 ಬರಿದಾದ ಈ ಮನಕೆ  ಭಾವನೆಗಳು ಬರಲು ಅರಳಿತು ಮನಸ್ಸು  ಕೆರಳಿತು ಕನಸ್ಸು ಚಿಗುರಿತು ಚೆಲುವು  ಕುಡಿ ಒಡೆಯಿತು ಒಲವು........      ಸಾಗಿತು ಬದುಕು ಪ್ರೀತಿಯ ಕಡೆಗೆ  ನನ್ನಯ ಪಯಣ ಪ್ರೀತಿಯ ಎಡಗೆ  ಚೆಲುವಲ್ಲಿ ಕಂಡೆಮನದ ಬಯಕೆ  ತೀರಿತು ಇಂದು  ಪ್ರೀತಿಯ ಬಯಕೆ  ಸಾವಲು  ಕೂಡ ಬದುಕುವ ಅಸೆ  ನೋವಿನ ಜೀವನ ಜಯಿಸಿತು ಮನಸ್ಸೇ  ************ರಚನೆ ********** ಡಾ. ಚಂದ್ರಶೇಖರ. ಸಿ. ಹೆಚ್ 

💧💧ನೀನಾಗಿ 💧💧

 ನಿನ್ನಿಂದ ನೀನಾಗಿ  ನನ್ನಿಂದ ದೂರಾಗಿ  ಪ್ರೀತಿಯು ಮರೆತೋಗಿ  ಕಷ್ಟಗಳು ಎದುರಾಗಿ  ಜೀವನವು ಬೇಜಾರಾಗಿ  ಭಯವೊಂದು ಮನೆಯಾಗಿ  ಮನಸ್ಸೊಂದು ಮುಳ್ಳಾಗಿ  ಭಾವನೆಗಳು ಎದುರಾಗಿ  ಕನಸುಗಳು ಚೂರಾಗಿ  ಪ್ರೇಮವೂ ಕಣ್ಣೀರಾಗಿ  ನೆನಪೊಂದು ಸವಿಯಾಗಿ  ಜೀವನದಿ ಜೊತೆಯಾಗಿ  ಬಾಳುವೆಯ ಸುಖವಾಗಿ  ನೂರ್ಕಾಲ ಹಾಯಾಗಿ  ನಿನ್ನಿಂದ ನೀನಾಗಿ  ನನ್ನನು ಮರೆತೋಗಿ  ಬಾಳುವೆಯ ಹಾಯಾಗಿ  ************ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್ 

🌊🌊🌊ಕನಸು 🌊🌊🌊

 ಆಸೆಗಳು ನೂರು                 ಕನಸುಗಳು ಚೂರು  ನಮ್ಮೂರ ತೇರು                    ಎಳೆಯೋರು ಯಾರು  ಜಾತ್ರೆಯ ಸಂಜೆ                   ನೋಡುತ ಮುಸ್ಸಂಜೆ  ಕನಸ್ಸೊಂದು ಬಳಿ ಬಂತು                     ಸಡಗರವ ನನ್ನಲಿ ತಂತು  ಮಿಂಚಂತೆ ನೀ ಬಂದೆ                      ಒಲವನ್ನು ತಂದೆ  ಪಟ್ಟದ ದೇವರು ಜಾತ್ರೆಯಲ್ಲಿ                      ಪೂಜೆಯು ಜೋರು  ಹಣ್ಣು ಕಾಯಿ ಕೊಟ್ಟು                        ಮಂಗಳಾರತಿಗೆ ದುಡ್ಡಿಟ್ಟು  ದೇವರನು ಬೇಡಿದೆ                         ಹರಕೆಯನ್ನು ಕಾಡಿದೆ  ಓ ದೇವರೇ ನೀಡು                      ...

🌷🌷ಓ ನನ್ನ ಚಿನ್ನ 🌷🌷

 ನಾ ಕರೆದರೆ ನಿನ್ನ ತಿರುಗಿ  ನೋಡಲಿಲ್ಲವಲ್ಲೇ ನನ್ನ  ನಾ ಮರೆತು ಬಿಡುವ ಮುನ್ನ  ತಿರುಗಿ ನೋಡಿ ನಕ್ಕು ಬಿಡು  ಓ ನನ್ನ ಚಿನ್ನ  ನನ್ನ ಹೃದಯದಿ ಪುಟ್ಟ ಮನೆಯ ಮಾಡಿದೆ  ಅ ಪುಟ್ಟ ಮನೆಯಲ್ಲಿ ನಾನು  ನೀನಗಾಗಿ ನಾನು ಕಾದು ಕುತ್ತಿದ್ದೆ  ನೀ ಬರದ್ದಿದ್ದರೇನಂತೆ ಇನ್ನ  ನಾ ಮರೆಯುವ ಮುನ್ನ  ಒಮ್ಮೆ  ನೋಡಿ ನಕ್ಕು ಬಿಡು ಚಿನ್ನ  ನನ್ನ ಮರೆಯದ ಮನಕೆ ಘಾಯವು ಹಾಗಿದೆ  ಅ ಘಾಯಕೆ ನಾನೇ ಓಷಧಿ ಹಾಕಿದೆ  ನಾ ಮರೆಯುವ ಮುನ್ನ  ಒಮ್ಮೆ ನೋಡಿ ನಕ್ಕು ಬಿಡು ಚಿನ್ನ  *********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್ 

🌲⭐️ಮುಸುಕಾದ ಮನ ⭐️🌲

 ಮುಸುಕಾದ ಈ ಮನಕೆ  ನೀ ಬಂದೆ ಒಲವಾಗಿ  ದೇವರು ಕೊಟ್ಟ ವರವಾಗಿ  ಪ್ರೀತಿಯ ಈ ಬನಕೆ  ಚೆಲುವೊಂದು ಕೆರೆಯಾಗಿ  ಕೆರೆ ತುಂಬಿ ಹರಿದಾಗ  ನೀರೆಲ್ಲ ಕೆಸರಾಗಿ  ಮನಸ್ಸೆಲ್ಲ  ಕೆಂಪಾಗಿ  ಬಾಳೆಲ್ಲ ಖುಷಿಯಾಗಿ  ನಡೆಯಲಿ ಜೀವನ ಹಾಯಾಗಿ  *********ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್ 

❤🌹ಭಾವದ ಒಳಗೆ ❤🌹

 ಭಾವದ ಒಳಗೆ                    ನೋವಿನ ಘಳಿಗೆ  ಬೆರೆತರು ಕೂಡ                    ಮರೆಯದು ನೋಡ ಪ್ರೀತಿಯ ಒಲವು                      ಸುಂದರ ಮನವು  ಚೆಲುವಿನ ಕಡೆಗೆ                     ತಿರುಗಿದೆ ನೋಡ ನಾನೆಂಬ ಭ್ರಮೆಗೆ                    ನೀ ಸಾಕ್ಷಿಯಾದೆ  ಅರಳಿದ ಹೂವಿಗೆ                     ನೀ ದುಂಬಿಯಾದೆ  ಹೀರಿತು ಮಕರಂದ                        ಕಟ್ಟಿತು ಗೂಡೊಂದ  ನಾಲಿಗೆ ಸಿಹಿಯಾತು                          ದೇಹಕೆ  ಇತವಾಯಿತು  ಭಾವದ ಒಳಗೆ                   ನೋವಿನ ಘಳಿಗೆ  ಬೆರೆತರು ಕೂಡ        ...

🌲🌲ಕೆರೆಯೊಂದು ನೆರೆಯಾಗಿ 🌲🌲

 ಈ ಬದುಕು ನಿನಗಾಗಿ  ಕೆರೆಯೊಂದು ನೆರೆಯಾಗಿ  ಬಾಳೆಲ್ಲಾ ಬರಡಾಗಿ  ಸೂರಿಲ್ಲದ ಮನೆಯಾಗಿ  ತೆರಿಲ್ಲದ ಊರಾಗಿ  ನೀರೊಂದು ಭೂಮಿಯಲಿ  ಹರಿಯುತಿರಲು ಜೀವವೇ  ಹೋದಂತೆ ಕ್ಶಣವೊಂದು  ಎದುರಾಗಿ  ದೇವರು ಕಲಿಸಿದ ಪಾಠ  ಅರಿಯುವ ಮುಂಚೆ ಜೀವನದಿ ಆಟ  ಈ ಬದುಕು ನೀನಾಗಾಗಿ  ಕೆರೆಯೊಂದು ನೆರೆಯಾಗಿ  ನೀ ಸೇರು ಜೋತೆಯಾಗಿ  ********ರಚನೆ ***** ಡಾ. ಚಂದ್ರಶೇಖರ. ಸಿ. ಹೆಚ್ 

🌀💧ಬದುಕೆಲ್ಲ ಬರಡಾಗಿ 🌊💧

 ಬದುಕೆಲ್ಲ ಬರಡಾಗಿ  ಬಾಳ್ಳೊoದು ಹೊಳೆಯಾಗಿ  ಝರಿಯಂತೆ ಹರಿಯುತಿರಲು  ನೀ ಬಂದೆ ಒಲವಾಗಿ  ನನ ಜೀವ ಸೆಲೆಯಾಗಿ  ನೀ ಮೂಡಿದ ಮಲ್ಲಿಗೆಯ ಘಮವು ನನ್ನನು ತಾಕಿರಲು  ಮನಸ್ಸಲ್ಲಿ ಮಂದಹಾಸವು ಮೂಡೀರಲು  ಬದುಕುವ ಆಸೆಯೂ  ನನ್ನಲ್ಲಿ ಚಿಗೋರೊಡೆದು  ನಾ ಕಂಡ ಕನಸಿಗೆ  ಸ್ಪೂರ್ತಿಯು ನೀನಾದೆ  ನೀನಿಲ್ಲದ  ಈ  ಬದುಕು  ಭೋರ್ಗರೆವ ಅಲೆಯಂತೆ  ಈ ನನ್ನ ಜೀವಕೆ ಸಂಜೀವಿನಿ ನಿನಂತೆ  ಬದುಕೆಲ್ಲ ಬರಡಾಗಿ  ಬಾಳ್ಳೋಂದು ಹೋಳೆಯಾಗಿ  ಝರಿಯಂತೆ ಹರಿಯುತಿರಲು  ನೀ ಬಂದೆ ಒಲವಾಗಿ  ನನ ಜೀವ ಸೆಲೆಯಾಗಿ  ******ರಚನೆ ******** ಡಾ. ಚಂದ್ರಶೇಖರ. ಸಿ. ಹೆಚ್ 

⭐️⭐️ಮರೆಯಾದ ಬದುಕು 🍂

 ಮರೆಯಾದ ಬದುಕು                  ಮರಳಿಗೂಡಿಗೆ ಬಂತು  ಸೆರೆಯಾದ ಹೃದಯ              ಒಲವನ್ನು ತಂತು  ಕನಸಿಗೆ ಬಂದ              ಕನ್ಯೆಯು ನೀನು  ಕೊಂಬೆಯಲ್ಲಿ ಜೋತು ಬಿದ್ದ                             ಕೋಲು ಜೇನು  ಗೂಬ್ಬಚಿ ಗೂಡಿಂದಾ                    ನೀ ಹಾರಿ ಬಂದೆ  ಕಾಳನ್ನು ತಿಂದು                   ನೀರಲ್ಲೀ ಮಿಂದೆ  ಹಾರುವ ಅಸೆ            ಆಕಾಶಕ್ಕೆ ಏರಲು ಮನಸ್ಸೇ  ರೆಕ್ಕೆಯ ಬಡಿದು          ಭೂಮಿಯ ಬಿಟ್ಟ ಕನಸ್ಸೇ  ಹಕ್ಕಿಯ ಜೀವನ              ಸುಂದರ ಸೋಪಾನ  ಮೂಡಿದ ಕನಸ್ಸಿಗೆ             ಆತ್ಮವೇ ಹೂಬನ  ಸೆರೆಯಾಗೋ  ಪ್ರೀತಿಗೆ               ನಾನಾದೆ...