🏩🏨ಮಮತೆಯ ಮಡಿಲು 🏩🏣
ಮಮತೆಯ ಮಡಿಲಲಿ
ಮೌನಿಯು ನಾನಾದೆ
ನಿನ್ನಯ ಪ್ರೀತಿಗೆ
ಸೋತು ಶರಣಾದೆ
ನಿನ್ನಯ ಮಾತು
ಒಲವಿನ ಮುತ್ತು
ಪ್ರೀತಿಯ ಮಳೆಯಲ್ಲಿ
ನಾನು ನೆನೆದಂತಾಯಿತು
ಹರಿಯುವ ನೀರು
ಸೇರಿತು ನದಿಗೆ
ನನ್ನಯ ಬದುಕು
ಬಲೆಯಲ್ಲಿ ಬಿದ್ದ ಮೀನಿನ ಹಾಗೆ
ಪ್ರೀತಿಯ ಮೀನು
ಸೇರಿತು ಧಡವ
ತೋರಿತು ಮೀನು ಮತ್ತೆ
ನೀರಿಗೆ ಬೀಳುವ ಚಲವ
ನೀರಿಗೆ ಬಿದ್ದ ಮೀನಿನ ಹಾಗೆ
ನನ್ನಯ ಪ್ರೀತಿಯ ಸಲುಗೆ
ಮಮತೆಯ ಮಡಿಲಲಿ
ಮೌನಿಯು ನಾನಾದೆ
ನಿನ್ನಯ ಪ್ರೀತಿಗೆ
ಸೋತು ಶರಣಾದೆ
***********ರಚನೆ ****************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment