💃💃ಡಿಂಪಲ್ ಕೆನ್ನೆ 💃💃
ಡಿಂಪಲ್ ಕೆನ್ನೆಯ ಹುಡುಗಿ
ಕಣ್ಣ ಸನ್ನೆಯ ಬೆಡಗಿ
ನಿನ ನೋಟ ಬಲು ಚೆಂದ
ಪದವಿಲ್ಲ ಬಣ್ಣಿಸಲು ನಿನ್ನ ಅಂದ
ಆ ನಿನ್ನ ಮೈಮಾಟ ಬಳುಕುವ
ಬಳ್ಳಿಯ ತೆನೆಯಾಟ
ನಿನ ನಡುಗೆ ಸೂಗಸಂತೆ
ಹೂವೊಂದು ನೆಲದಲ್ಲಿ ಬಿದ್ದಂತೆ
ಆ ನಿನ್ನ ವೈಯಾರ ನೋಡುತ
ನಿಂತ ರಾಜಕುಮಾರ
ನಿನ ಮಾತು ಮುತ್ತಂತೆ
ಜೇನಿನ ಸಿಹಿಯಂತೆ
ಸೌಂದರ್ಯದ ಗಣಿ ನೀನು
ಗುಣದಲ್ಲಿ ನೀರಿನಲ್ಲಿನ ಮೀನು
ನಡತೆಯು ಪರಿಶುದ್ಧ
ಚಲದಿಂದ ಮನಗೆದ್ದ
ಡಿಂಪಲ್ ಕೆನ್ನೆಯ ಹುಡುಗಿ
ಕಣ್ಣ ಸನ್ನೆಯ ಬೆಡಗಿ
*************ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment