❤🌹ಭಾವದ ಒಳಗೆ ❤🌹
ಭಾವದ ಒಳಗೆ
ನೋವಿನ ಘಳಿಗೆ
ಬೆರೆತರು ಕೂಡ
ಮರೆಯದು ನೋಡ
ಪ್ರೀತಿಯ ಒಲವು
ಸುಂದರ ಮನವು
ಚೆಲುವಿನ ಕಡೆಗೆ
ತಿರುಗಿದೆ ನೋಡ
ನಾನೆಂಬ ಭ್ರಮೆಗೆ
ನೀ ಸಾಕ್ಷಿಯಾದೆ
ಅರಳಿದ ಹೂವಿಗೆ
ನೀ ದುಂಬಿಯಾದೆ
ಹೀರಿತು ಮಕರಂದ
ಕಟ್ಟಿತು ಗೂಡೊಂದ
ನಾಲಿಗೆ ಸಿಹಿಯಾತು
ದೇಹಕೆ ಇತವಾಯಿತು
ಭಾವದ ಒಳಗೆ
ನೋವಿನ ಘಳಿಗೆ
ಬೆರೆತರು ಕೂಡ
ಮರೆಯದು ನೋಡ
ಮನಸಿನ ಮಳಿಗೆ
ಆಸೆಯ ಸುಳಿಗೆ
ನಿನ್ನಾಸೆ ಹೂವಾಗಿ
ಕಾಯೆಲ್ಲ ಹಣ್ಣಾಗಿ
ಕಾಯುತ ನಿನ್ನ
ನಗುತಿದೆ ನೋಡ
ಮುದುಡಿದ ಹೂವು
ಕದಡಿದ ನೀರು
ಘಮವನ್ನು ಎಂದು
ಬೀರದು ನೋಡ
*********ರಚನೆ *******
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment