🌳🌳ಸೆರೆಯಾದೆ ನಾನು 🌳🌳

 ಈ ಪಯಣದಿ ನೀ ಜೊತೆಯಾದೆ 

ನನ ಬಾಳಿಗೆ ನೀ ಸಖಿಯಾದೆ 

ನಿನ್ನಯ ಪ್ರೀತಿಗೆ ನಾ ಮೂಖನಾದೆ 

ಆ ನಿನ್ನ ಮಾತಿಗೆ ನಾ ಸೋತೋದೆ 

ಸಿಡಿಲಂತೆ ಬಂದ ಈ ಪ್ರೀತಿ 

ಮಿಂಚಂತೆ ಆಗಸದಿ ಬಂದೈತಿ 

ಮಳೆ ಹನಿಯು ಸುರಿದು 

ಆ ಹನಿಯಲ್ಲಿ ತೋಯ್ದು 

 ಭೂಮಿಗೆ ತಂಪು ನಿಡೈತಿ 

ನೀ ನನಗಾಗಿ ತಂದ ಈ ಪ್ರೀತಿ 

ಮಾತೆಲ್ಲ ಮುತ್ತಂತೆ 

ನೋಟವು ಕಾಮನಬಿಲ್ಲಂತೆ 

ಬಣ್ಣಗಳು ಆಕಾಶದಿ ಮೂಡಿ 

ಆ ಮೊಡವೆ ತಿಳಿ ನೀಲಿ 

ಮಳೆ ಹನಿಯು ಬಿದ್ದಂಗೆ ಮನದಲ್ಲಿ 

ನಿನ್ನ ಗೆಜ್ಜೆಯ ಸದ್ದು ಬಾಳಲಿ 

ನಕ್ಷತ್ರದಂತೆ ಆ ನಿನ್ನ ನೋಟ 

ಸೆರೆಯಾದೆ ನಾನು ಆ ನಿನ್ನ ತುಂಟ ಕಣ್ಣಾಟ 

***********ರಚನೆ ************

ಡಾ. ಚಂದ್ರಶೇಖರ. ಸಿ. ಹೆಚ್ 

Comments

Popular posts from this blog

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ

ಚುಟುಕು ಕವನ-35