🌊🌊🌊ಕನಸು 🌊🌊🌊
ಆಸೆಗಳು ನೂರು
ಕನಸುಗಳು ಚೂರು
ನಮ್ಮೂರ ತೇರು
ಎಳೆಯೋರು ಯಾರು
ಜಾತ್ರೆಯ ಸಂಜೆ
ನೋಡುತ ಮುಸ್ಸಂಜೆ
ಕನಸ್ಸೊಂದು ಬಳಿ ಬಂತು
ಸಡಗರವ ನನ್ನಲಿ ತಂತು
ಮಿಂಚಂತೆ ನೀ ಬಂದೆ
ಒಲವನ್ನು ತಂದೆ
ಪಟ್ಟದ ದೇವರು ಜಾತ್ರೆಯಲ್ಲಿ
ಪೂಜೆಯು ಜೋರು
ಹಣ್ಣು ಕಾಯಿ ಕೊಟ್ಟು
ಮಂಗಳಾರತಿಗೆ ದುಡ್ಡಿಟ್ಟು
ದೇವರನು ಬೇಡಿದೆ
ಹರಕೆಯನ್ನು ಕಾಡಿದೆ
ಓ ದೇವರೇ ನೀಡು
ಸುಖವಾಗಿರಲಿ ನಮ್ಮಿಬ್ಬರ ಜೋಡು
ಆಸೆಗಳು ನೂರು
ಕನಸುಗಳು ಚೂರು
ನಮ್ಮೋರ ತೇರು
ಎಳೆಯೋರು ಯಾರು
*************ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment