🌺🥀ಒಂದು ಹುಡುಗಿಯ ಕಥೆ 🥀🌺
ನಗುವಿನ ಮೊಗದ ಚೆಲುವನೇ ನೀನು
ಸುಂದರ ಹುಡುಗಿಯ ನೋಡಲೇ ನಾನು
ಅವನು ನಕ್ಕನು ಹುಡುಗಿಯ ನೋಡಿ
ಹುಡುಗಿ ಆದಳು ಇವನಿಗೆ ಜೋಡಿ
ಅವನಿಗಾಗಿ ಮುಡಿದಳು ಮಲ್ಲಿಗೆ ಹೂವು
ಅವನು ಕೊಟ್ಟನು ಆಕೆಯ ಜೀವನದಿ ನೋವು
ಕಣ್ಣಲಿ ಹೊಳಪು ಹಾಲಿನ ಬಿಳುಪು
ಸೋತನು ಅವನು ನೋಡಿ ಚೆಲುವಿನ ಬಿಳಿಪು
ಮನದಲಿ ಮಿಡಿತ ಹೃದಯದಿ ತುಡಿತ
ಅವನ ಮೋಸಕೆ ನೋವಿನ ಪ್ರೀತಿ ಖಚಿತ
ಅವನ ನೋಟ ಆಕೆಗೆ ಕಲಿಸಿತು ಪಾಠ
ಜೀವನದಲ್ಲಿ ತಿಳಿದಳು ನಿಜವಾ
ಅವನು ಮಾಡಿದ ಮೋಸದ ಒಲವ
ಹುಡುಗಿ ಎತ್ತಳು ಒಂದೂ ಮಗುವ
ಬೀದಿಯಲ್ಲಿ ಬಿಟ್ಟಳು ತಬ್ಬಲಿ ಮಾಡಿ ಮಗುವ
ನೋವಿನ ತೇರು ಬಿಟ್ಟಳು ಊರು
ದೂರದ ಊರಲಿ ಸಿಕ್ಕಿತು ಸೂರು
ಆ ಸೂರಲಿ ಕಂಡಳು ನೋವಿನ ಬದುಕು
ದೇವರು ಕೊಟ್ಟನು ನೆಮ್ಮದಿ ಬದುಕು
ಜೀವನವೆಂಬುದು ಅರಿಯದ ಮಾಯೆ
ಬದುಕಲು ಕಲಿತಳು ಮರೆತು ನೋವಿನ ಛಾಯೆ
ಹೇಳಿದೆ ನಾನು ಹುಡಿಗಿಯ ಕಥೆಯ
ನೊಂದು ಬೆಂದ ಜೀವನದ ವ್ಯಥೆಯ
**********ರಚನೆ ***********
ಡಾ ಚಂದ್ರಶೇಖರ. ಸಿ. ಹೆಚ್
Comments
Post a Comment