🌈🌈ರಂಗೋಲಿ 🌺🌺
ಮುಂಜಾನೆ ನಾ ಬಂದೆ ರಂಗೋಲಿ ನೀ ತಂದೆ
ರಂಗೋಲಿ ನೀ ಬಿಡಲು ರಂಗಾಯಿತು ಮನಸ್ಸೆಲ್ಲ
ಮನಸ್ಸೆಂಬ ಮನೆಗೆ ಕಾಲಿಟ್ಟೆ ಹೃದಯಕ್ಕೆ
ಹೃದಯದ ಗೂಡಿನ ಬಡಿತವೇ ನೀನಾದೆ
ಪ್ರೀತಿಯಲಿ ನಾ ಮುಳುಗಿ ನೀನ್ನ ಗುಂಗಲ್ಲಿ ತೇಲೋಗಿ
ನಿನ್ನಿಂದೆ ನಾ ಬರಲು ನೀ ಹೊರಟೆ ಹಾಯಾಗಿ
ಮುಂಜಾನೆ ನಾ ಬಂದೆ ರಂಗೋಲಿ ನೀ ತಂದೆ
ರಂಗೋಲಿ ನೀ ಬಿಡಲು ಚೂರಾಯ್ತು ಮನಸೆಲ್ಲ
ರಂಗೋಲಿ ನೀ ಬಿಟ್ಟೆ ನೀ ನನಗೆ ಕೈ ಕೊಟ್ಟೆ
ಮತೊಬ್ಬನ ಸತಿಯಾದೆ ನನ್ನಿಂದ ದೂರದೇ
ಮನಸ್ಸೆಲ್ಲ ಚೂರಾಯ್ತು ಹೃದಯವೇ ಕಲ್ಲಾಯಿತು
ಕಲ್ಲನ್ನು ಕೈ ಹಿಡಿದ ಹುಡುಗಿಯು ಬಂದಾಗ
ಬಾಳಲ್ಲಿ ಬಂದ ಹೊಸ ಪ್ರೀತಿಯ ಕಂಡಾಗ
ರಂಗೋಲಿ ನೆನಪಾಯ್ತು ಕನಸ್ಸೆಲ್ಲ ನಾನಸ್ಸಯ್ತು
ಮುಂಜಾನೆ ನೀ ಬಂದೆ ರಂಗೋಲಿ ನೀ ತಂದೆ
ರಂಗೋಲಿ ನೀ ಬಿಡಲು ರಂಗಾಯಿತು ಮನಸ್ಸೆಲ್ಲ
*************ರಚನೆ ****-**-*****
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment