⭐️⭐️ಮರೆಯಾದ ಬದುಕು 🍂
ಮರೆಯಾದ ಬದುಕು
ಮರಳಿಗೂಡಿಗೆ ಬಂತು
ಸೆರೆಯಾದ ಹೃದಯ
ಒಲವನ್ನು ತಂತು
ಕನಸಿಗೆ ಬಂದ
ಕನ್ಯೆಯು ನೀನು
ಕೊಂಬೆಯಲ್ಲಿ ಜೋತು ಬಿದ್ದ
ಕೋಲು ಜೇನು
ಗೂಬ್ಬಚಿ ಗೂಡಿಂದಾ
ನೀ ಹಾರಿ ಬಂದೆ
ಕಾಳನ್ನು ತಿಂದು
ನೀರಲ್ಲೀ ಮಿಂದೆ
ಹಾರುವ ಅಸೆ
ಆಕಾಶಕ್ಕೆ ಏರಲು ಮನಸ್ಸೇ
ರೆಕ್ಕೆಯ ಬಡಿದು
ಭೂಮಿಯ ಬಿಟ್ಟ ಕನಸ್ಸೇ
ಹಕ್ಕಿಯ ಜೀವನ
ಸುಂದರ ಸೋಪಾನ
ಮೂಡಿದ ಕನಸ್ಸಿಗೆ
ಆತ್ಮವೇ ಹೂಬನ
ಸೆರೆಯಾಗೋ ಪ್ರೀತಿಗೆ
ನಾನಾದೆ ಕಾರಣ
ಒಲವಿನ ಪ್ರೀತಿಗೆ
ನೀನಾದೆ ತೋರಣ
ಮರೆಯಾದ ಬದುಕು
ಮರಳಿಗೂಡಿಗೆ ಬಂತು
ಸೆರೆಯಾದ ಹೃದಯ
ಒಲವನ್ನು ತಂತು
********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment