ಎಲ್ಲಾ ಉಂಟು
ಒಳಗೆ ಹೊರಗುಂಟು ಈ ಲೋಕ ಕಗ್ಗಂಟು ಮನಸ್ಸು ಮನಸ್ಸುಗಳ ಮದ್ಯೆ ಚಿಂತೆ ನೊರೆಂಟು ಬಯಸಿದರೆ ಸಿಗದ ಬೆಳಕಲ್ಲಿ ನೋವುಂಟು ನನ್ನಾಸೆ ಹೂವಿಗೆ ಬೇಡಿಕೆ ಬಹಳ ಉಂಟು ಹಾರುವ ಹಕ್ಕಿಗೆ ನೊರೆಂಟು ತೊಡರುಂಟು ಈಜುವ ಮೀನಿಗೆ ಸಮುದ್ರದಿ ಸಾವುಂಟು ಹಾಡುವ ಕೋಗಿಲೆಗೆ ಮಾಮರದ ಚಿಗುರುಂಟು ಬರಹಕು ಶಾಹಿಯ ಪದದಿ ಕೊನೆಉಂಟು ಹರಿವ ನದಿಗೆ ಸಮುದ್ರದಿ ನೆಲೆ ಉಂಟು ಹಾರುವ ಗಾಳಿಪಟದ ಮುಗುದಾರ ಕೈಲುಂಟು ನಗುವ ಕೆನ್ನಗೆ ವಯಸ್ಸಲ್ಲೂ ಸುಕ್ಕುಂಟು ಮನಸ್ಸಿನ ವ್ಯಥೆಗೆ ಚಿಂತೆ ಎಂಬ ಸಮಾದಿ ಉಂಟು ಮಾನವನಿಗೂ ಅರಿಯದ ವಿಸ್ಮಯ ಉಂಟು ಆಕಾಶದಿ ನಕ್ಷತ್ರದ ಮಿಂಚಿನ ಗೂಡು ಉಂಟು ಸೂರ್ಯನಲಿ ಕುದಿಯುವ ಬೆಂಕಿಯ ಸೆಲೆ ಉಂಟು ಎಲ್ಲವೂ ಉಂಟು ಯಾರಿಗೂ ತಿಳಿಯದ ಕಗ್ಗಂಟು ಎಲ್ಲದಕ್ಕೂ ತನ್ನದೇ ಆದ ಹಿತಿ ಮಿತಿ ಉಂಟು ಸರ್ವರಿಗೂ ಸಮಪಾಲು ಸಹಬಾಳ್ವೆ ಉಂಟು **********ರಚನೆ ********* ಡಾ. ಚಂದ್ರಶೇಖರ. ಸಿ. ಹೆಚ್