ಹೇನಿದು ಗೋಳು
ಓ ದೇವರೇ ಒಮ್ಮೆ ನೀ ಕೇಳು
ಹೇನಿದು ಗೋಳು
ಕಣ್ಣ ನೋಟಕೆ
ಕುಣಿದಿದೆ ಬಾಳು
ತುಂಟ ನಗೆ
ಬೀರಿದೆ ವಯಸ್ಸು
ಮಾತು ಮಾತು
ಮುತ್ತಾಗೋ ಕನಸು
ಒಲವ ಪಯಣದಿ
ಪ್ರೀತಿ ಮರೆತ ಹೂವು
ಅರಳುವ ಮುಂಚೆಯೇ
ಯಾಕೋ ಬಾಡಿದೆ
ಮನದ ಆಸೆಯ
ಕಿತ್ತು ತಿಂದಿದೆ
ನೋವ ತಾಳದೇ
ಮನವು ಬೇರೆ
ದಾರಿ ಹಿಡಿದಿದೆ
ಕಾಣದ ಲೋಕ
ಕೈಬಿಸಿ ಕರೆದಿದೆ
ಪ್ರೀತಿಲಿ ಸೋತು
ನೊಂದ ಮನವನು
ಸಂತೈಸಿ ಹೇಳಿದೆ
ನನ್ನ ಅಳುವ ದೊರೆ ನೀನೇ
ಈ ಲೋಕವು ನಾನೇ
ಹೇನಿದು ಗೋಳು
ಓ ದೇವರೇ ಕೇಳು
ಕಣ್ಣ ನೋಟಕೆ
ಕುಣಿದಿದೆ ಬಾಳು
ಜಗವ ಗೆಲ್ಲೊ
ಚಲದಿ ಬಂದ
ಇವನ ಬದುಕು
ತರಗೇಲೇಯಂತೆ
ಹುದುರಿ ನಿಂತಿದೆ
ಸಾವು ಒಂದೂ
ಸನಿಹಕೆ ಬಂದು
ಕನಸು ಕೊಂದು
ನೂರಾಸೆ ತಿಂದು
ಬದುಕ ಮುಗಿಸಿದೆ
ಓ ದೇವರೇ ನೋಡು
ಗೋಳು
ಈ ಸಾವು ನ್ಯಾಯವೇ ಹೇಳು
*********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment