ಒಡೆದ ಬದುಕು





ಒಲ ವಾಗೋ ನಿನ್ನ

ಸೆರೆಯಿಡಿಯಲ್ಲಿ ಹೇಗೆ ಚಿನ್ನ

ನಿನ್ನ ಮುದ್ದೂ ಪ್ರೀತಿಯನ್ನ

ಮುದ್ದಾಡಲೆ  ರನ್ನ


ಕನಸಲ್ಲಿ ಕಂಡೆ  ನಿನ್ನ ಪ್ರತಿಬಿಂಬವ

ಸಣ್ಣ ಹನಿಯೊಂದು ಚೂರು ಮಾಡಿತು

ನನ್ನಯ್ಯ ಒಲವ ಬಿಂಬ


ಮನಸು ಮನಸು ತಾಗುವ ಮುನ್ನ

ಒಲವಾಯಿತು

ನಾ ಕಂಡ ಕನಸು ನಿನ್ನಿಂದ

ನೆಲೆಯಾಯ್ತು

ನಿನ್ನ ನಾ ಸೇರುವ ಒಳಗೆ

ಜೇಡರ ಬಲೆಯಾಯ್ತು 


ಮಧುರ ಬಾವದಿ ಹಾಡೊಂದು

ಹಿತವಾಯ್ತು

ಸಂಗೀತದ ನಾದಕೆ ಹೃದಯ

ಕುಣಿದಾಯ್ತು

ನಿನ್ನ ನೋಡುತ ನನಗೆ ಯಾಕೋ

ಮನಸಾಯ್ತು


ನಿನ್ನ ಬಿಟ್ಟಿರದೆ ಜೀವ ತೋಳಲಿದೆ

ನೀ ಬಳಿ ಬಾ ಎಂದು ಮನಸ್ಸು ಕೂಗಿದೆ

ನಿನ್ನ ಅಸೆ ಹೊತ್ತು ನಾನು ತಿರುಗಿದೆ

ನೀ ಇರದೇ ಏಕೋ ಬದುಕು ಒಡೆದ ಕನ್ನಡಿಯಾಗಿದೆ


**********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್ 


Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple