ನಡೆದು ಹೋಯಿತಲ್ಲ
ಕವಿಯಾಗ ಬಯಸಿ ನಾ
ಕವನ ಗೀಚಲಿಲ್ಲ
ಅಂಕೆಗಳ ಮುಂದೆ ನಾನಿದ್ದರೆ
ಬೆಲೆ ಎಂದು ಸೊನ್ನೆ ಹುಟ್ಟಲಿಲ್ಲ
ಹರಿವ ಸಿಹಿ ನದಿಯ ನೀರು
ಉಪ್ಪೆಂದು ತಿಳಿದು ಸಮುದ್ರ ಸೇರಲಿಲ್ಲ
ಅರಣ್ಯದಲ್ಲಿ ವನ್ಯ ಮೃಗಗಳ
ನೋಡಿ ಜಿಂಕೆ ಜೀವಿಸುತಿಲ್ಲ
ಸಮುದ್ರದಿ ಸಾವೆಂದು ತಿಳಿದು
ಮೀನು ಈಜು ಕಲಿಯಲಿಲ್ಲ
ಬೆಂಕಿಯಲಿ ಬೇಯುವೆ ಎಂದು ಹೆದರಿ
ಮರಗಿಡ ಬೆಳೆಯಲು ನಿಲ್ಲಿಸಲಿಲ್ಲ
ದ್ರೋಣಚಾರ್ಯ ಎಂಬ ಗುರುವು
ಶಿಷ್ಯ ಏಕಲವ್ಯಾನಿಗೆ ವಿದ್ಯೆ ಕಲಿಸಲಿಲ್ಲ
ಸೀತೆಯು ರಾವಣನ ನೋಡಿ
ರಾಮಾಯಣ ಶುರುವಾಗಲಿಲ್ಲ
ಶಕುನಿ ಆಡಿದ ಪಗಡೆಯಟಕೆ
ಮಹಾಭಾರತ ನಡೆಯಲಿಲ್ಲ
ನನ್ನ ನಲ್ಲೆಯ ಕುಡಿ ನೋಟದ
ಮೃದು ಮಾತಿಗೆ ಸೋತು ನಾನು
ನಲ್ಲ ನಾಗಲಿಲ್ಲ
ಚಂದ್ರನಿಗೆ ಹೆದರಿ ಓಡಿ
ಸೂರ್ಯ ಮುಳುಗಲಿಲ್ಲ
ಮನುಷ್ಯನ ಸೃಷ್ಟಿ ನೋಡಿ
ಪ್ರಕೃತಿಯ ದೈವ ಬೆರಗಾಗಲಿಲ್ಲ
ನಡೆವ ಕಾಲದಿ ತಡೆಯದೆಯೇ
ಎಲ್ಲಾ ನಡೆದು ಹೋಯಿತಲ್ಲ.
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment