ಮಾತಲಿ ಬೆಲ್ಲ




ನಲ್ಲೆಯೇ ನಿನ್ನ ನೋಟಕೆ

ಸುಮ್ಮನೆ ಸೋತಿಹೇ ನಾನೀಗ

ನಿನ್ನ ಮೋಹಕ ನಗುವಿಗೆ

ಪ್ರೇಮಿಯೂ ನಾನೀಗ


ಮಾತಲ್ಲಿ ಬೆಲ್ಲ ಮುದ್ದಾದ ಗಲ್ಲ

ಸವಿಯಲಿ ಹಿಡಿದ ನಾನೆ ನಲ್ಲ

ಪಿಸು ಪಿಸು ಮಾತು ಹಾಡು ಮೆಲ್ಲ

ಬಳುಕುವ ಸೊಂಟ ಕಾಮನಬಿಲ್ಲ



ಹದಿಹರೆಯದ ವಯಸ್ಸು

ಉಕ್ಕುವ ಸುಂದರಸೋಗಸು 

ಮನದಲ್ಲಿ ಬಿತ್ತಿದೆ ಕನಸ್ಸು

ಏಕೋ ಏನೋ ನಿನ ಮೇಲೆ ಮನಸ್ಸು


ಕಾಡುವ ಸುಂದರ ಮೊಗದೂಳೆ

 ಮುಡಿಯಲ್ಲಿ ಮಲ್ಲಿಗೆ ಮುಡಿದವಳೇ

ಕಣ್ಣಲೇ ನನ್ನ ಕರೆದವಳೇ

ನಗುವಲಿ ನನ್ನ ಸೆಳೆದವಳೇ


ಕುಂತರು ಹಾಗೆ ನಿನ ಧ್ಯಾನ

ನಿನ್ನ ಮಾತು ಸುಂದರ ಗಾನ

ಆಸೆ ಏಕೋ ಬಯಸಿ ಮಿಲನ

ಪ್ರೀತಿಗೆ ಪ್ರೀತಿಯ ನೆನಪೇ ಮೌನ



***********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple