ಭಾವನೆಗಳ ಚಿತ್ತಾರ
ಕಾಣದ ಹೂವೊಂದು
ಕೈ ಬಿಸಿ ಕರೆಯಿತು
ನೋವಿನ ತೀರಕೆ
ನನ್ನನ್ನು ಸೆಳೆಯಿತು
ನಡು ದಾರಿಯಲ್ಲಿ
ಏಕೋ ತೊರೆಯಿತು
ಬಿಡಿಸದ ರಂಗೋಲಿ
ಬದುಕನ್ನು ಕಟ್ಟಿತು
ಒಲವಿನ ಆಸೆ
ಮತ್ತೆ ಹುಟ್ಟಿತು
ಜೀವನವು ಬಣ್ಣ
ನೋವು ಗೆಲುವಿನ ಸುಣ್ಣ
ತೆರೆದು ನೋಡು ಕಣ್ಣ
ನೆನೆದು ಸಾಗಿದ ಮಣ್ಣ
ಬರೆದ ಭಾವನೆಗಳ ಚಿತ್ತಾರವೇ
ನೆನಪುಗಳ ಬಣ್ಣ
*********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment