ಯುಗಾದಿ
ನವ ವಸಂತದ ಯುಗಾದಿ
ಹೊಸವರುಷದ ಬುನಾದಿ
ಚಿಗುರೆಲೇ ಚಿಗುರಿ ವನದಿ
ಹಕ್ಕಿ ಚಿಲಿಪಿಲಿ ಕೂಗಿ ಸಂತಸದಿ
ಮುಂಗಾರು ಮಳೆಯೂ ಬಂತು
ನೋಗವ ಕಟ್ಟಿ ಜಗವ ಗೆಲ್ಲುವಂತೆ
ಹುಳುಮೆ ಭೂಮಿ ಅಸನು ಆತು
ರೈತನ ಮೋಗಾದಿ ಖೂಷಿ ತಂತು
ಹರಿಶಿನ ಎಣ್ಣೆ ನೀರು ಮೈ ತಾಕಿ
ಚರ್ಮದ ಕಣವ ಇಂಚಿಚು ಸೋಕಿ
ಕೊಳೆಯೋ ತೆಗೆಯೋ ಸ್ನಾನವೇ
ಪಾಪ ಕಳೆಯೋ ಯೋಗವೆ
ಆಗಸದಿ ತುಂಡಾದ ಚಂದಿರ
ನೋಡಲು ಏಕೋ ಅವಸರ
ಕಂಡ ಒಡನೆ ಬೇವು ಬೆಲ್ಲ
ಕಷ್ಟ ಸುಖವು ಸಮದಿ ಬಾಳ ಲ್ಲೆಲ್ಲಾ
ಊರ ತುಂಬಾ ಒಳ್ಳೆ ಸಡಗರ
ಹಿರಿಯರ ಆಶೀರ್ವಾದ ಜಯಕರ
ಈ ವರುಷ ಮಳೆಯೂ ಜಾಸ್ತಿ
ಬೀಸೋ ಗಾಳಿ ಕಡಿಮೆ ಓ ಅರ
**********ರಚನೆ ********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment