ನೋವಾಟೊ ಜೂಬ್ಲೀ
ಹಾಯ್ ಗೆಳೆಯರೆ ಈ ಕವನವನ್ನು ನಮ್ಮಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಕಡೂರಿನಲ್ಲಿ ನಡೆದ ಮೊದಲೆನೆಯ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ...... ವಿದ್ಯಾರ್ಥಿಗಳನ್ನು ಉದ್ದೇಶಿಸಿ ಬರೆದ ಕವನ
ವಿದ್ಯಾaಭ್ಯಾಸದಾ ಎರಡು ವರ್ಷ
ಕಂಡ ಹೊಸ ಹರುಷ
ಮರೆಯಾಗೋ ದಿನಗಳು
ಮರೆತ ಮನಸಿನ ಕಲೆಗಳು
ಸೇರಬಾರದಿತ್ತು ನಾವೂ ಇಲ್ಲಿ
ಸೇರಿದೆವು ನಾವೂ ತಿಳಿಯದೆ ಇಲ್ಲಿ
ರಸಾಯನಶಾಸ್ತ್ರ ಏಕೋ ಕಷ್ಟ
ಓದಿದ್ದು ಮರೆತೊಗೊ ಕಾಯಿಲೆಯೇ ಇಷ್ಟ
ಕಲಿತಿದ್ದು ಎಷ್ಟೋ
ಮರೆತಿದ್ದು ಎಷ್ಟೋ
ಕುಣಿದ ನೆನಪು
ನಲಿದ ಕ್ಷಣ ಹೊಳಪು
ಹೊಸದಾಗಿ ಬೆರೆತು
ಗೆಳೆತನದಿ ಕಲೆತು
ನೋವುಗಳ ಮರೆತು
ಕಷ್ಟಗಳ ಅರಿತು
ಪರೀಕ್ಷೆಗಳ ಬರೆದು
ಉತ್ತಿರ್ಣಕ್ಕಾಗಿ ಕಾದು
ಬೇಜಾರು ಮನಸ್ಸಲ್ಲಿ
ಕಡಿಮೆ ಅಂಕ ಯಾಕೋ ಇಲ್ಲಿ
ಉಪನ್ಯಾಸಕರ ಶಪಿಸಿ ವಿಶ್ವವಿದ್ಯಾಲಯವ ಸ್ಮರಿಸಿ
ಕಣ್ಣು ಮುಚ್ಚಿ ತೆಗೆಯೋವೊಳಗೆ
ಮುಗಿದು ಹೋಯ್ತು ಎರಡು ವರ್ಷ
ನೆನಪುಗಳು ಕಾಡುವುದು
ಮತ್ತೆ ಕಳೆದ ದಿನಗಳ
ನೆನಪಿನಲಿ ಕಾಲವನು ದೂಡುವುದು
ಯಾರಿಗೆ ಹೇಳುವುದು ನಮ್ಮ ಹಣೆ ಬರಹವೇ ಇದು
ಏನುತ ನಗುತಾ ಮುಂದೆ ಸಾಗುವುದು
*********ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment