ನನ್ನಾಸ್ಸೇ ಹೂವು




ನನ್ನಾಸೆ ಹೂವಿಂದು

ನಸುನಗುತಾ ಅರಳಿದೆ

ನೂರೆಂಟು ಕನಸ

ಸಿಹಿ ಹೊತ್ತು ತಂದಿದೆ


ಕಾಣದ ಆಸೆಯೊಂದು

ಕೈಬಿಸಿ ಕರೆದಿದೆ

ನನ್ನ ನೂಕಿ ಮನವ ಕಲಕಿ

ದೂರಾಗೋ ಬಯಸಿದೆ


ಎಷ್ಟು ಪ್ರೀತಿ ಕೊಟ್ಟರು

ದುಂಬಿ ಕನಸ ಕಂಡಿದೆ

ಮನಸ್ಸೇಕೋ ಇಂದು

ಚೂರಾಗಿದೆ


ಯಾರಿಗೆ ಹೇಳಲಿ ನೋವನು

ಒಲವೇಕೋ ಮೌನದಲ್ಲಿ ಬರಿದಾಗಿದೆ

ಮೋಡದ ಮಳೆಯೂ ಸುರಿದು

ಕಣ್ಣ ಹನಿಯು ನೀರಾಗಿದೆ


ಕನಸ್ಸಿನ ಮೂಟೆ ಸವೆದು

ಪ್ರೀತಿ ಮಂಜಿನಂತೆ ಕರಾಗೋಗಿದೆ

ಗುಬ್ಬಚ್ಚಿ ಗೂಡಿನಲ್ಲಿ ಹಕ್ಕಿ ಇರದೇ

ಜೋತಡೋ ಮನೆಯಾಗಿದೆ


ನಸುನಕ್ಕ  ಹುವೊಂದು

ಮನದಲ್ಲಿ ಬೆಂಕಿ ಇಟ್ಟು

ನಗುವಿನಲ್ಲಿ ನನ್ನ ಸುಟ್ಟು

ಬೇರೆಯ ಹೃದಯದ

ಪಾಲಗಿದೆ


ನೀರಿನಲ್ಲಿ ಮೂಡಿದ

ಬಿಂಬವೊಂದು

ಸಣ್ಣ ಹನಿಗೆ ಛಾಯೆಯೆ

ಮಾಯವಾಗಿದೆ


**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20