ಕಣ್ಣಮುಚ್ಚಾಲೆ





ಕಣ್ಣು ಕಾಣದಾಯಿತೇ

ಕುರುಡು ಪ್ರೀತಿಗೆ

ನೋಟವೇಕೋ ನಾಟಿತೆ

ಮನದ ಒಲವಿಗೆ


ನಿನ್ನ ಆಟ ಕಣ್ಣ ಮುಚ್ಚಾಲೆ

ಸೋತ ಪ್ರೀತಿ ಊಯ್ಯಾಲೆ

ಬದುಕು ಭಾರ ನಿನ್ನ ಗುಂಗಲ್ಲೇ

ಮರೆತೇ  ನಿನ್ನ ನನ್ನ ಕನಸ್ಸಲ್ಲೇ


ಕಾಣದ ಪ್ರೀತಿ ಏಕೋ ಕತ್ತಲೆ

ಬಾಳ ಕೈಯೊಂದು ಬೆನ್ನಲ್ಲೇ

ಮನವು ಕೆರಳಿತು ಮತ್ತಲ್ಲೇ

ನಿನ್ನ ನೆನಪು ಬಂದಾಗ ಓ ನಲ್ಲೆ


ಹೃದಯ ಭಾರವಾಯಿತು

ಮನಸ್ಸು ಮೌನವಾಯಿತು

ಕನಸ್ಸು ಕರಗಿ ಹೋಯಿತು

ನಿನ್ನ ಹೆಸರಲ್ಲಿ ಸೋಲು ನನದಾಯಿತು


*************ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

Author biography of Chandrashekhar Channapura Halappa

ಬಾರ್ ನನ್ನ ಗೆಳೆಯ

11. Yeah dimple