ಪ್ರೀತಿ ನೋವು
ಮನಸ್ಸು ಯಾಕೋ
ಬರಿದಾಯ್ತು
ನಿನ್ನ ನೆನಪೇ ಕೊನೆಯಯ್ತು
ಯಾರು ಬರೆದ
ಹಣೆಯ ಬರಹ
ಅಳಿಸಲಾರದ ನೋವೇ ವಿರಹ
ನೀನು ಇರದ ಬದುಕು
ಕಾದ ಕಬ್ಬಿಣದ ಸರಕು
ಬಾಳ ನೋಗವೆ ಬಿರುಕು
ತಿರುಗೋ ಕಾಲ ಚಕ್ರ ಮುರುಕು
ನೂರು ಬಾರಿ ದೇವರ ಶಪಿಸಿ
ಒಲವಿಗಾಗಿ ಪರಿತಪಿಸಿ
ಕಾಣೆಯಾಯ್ತು ಕಂಡ ಕನಸ್ಸು
ಕುಲುಮೆಯಾಗಿದೆ ಈ ಮನಸ್ಸು
ಕಣ್ಣ ಹನಿಯು ರಕ್ತವಾಯ್ತೆ
ಜೀವನದ ಕಥೆಯು ಮುಗಿದುವೋಯ್ತೆ
ಹಾಳೆ ಹರಿದು ಗಾಳಿ ಪಟವು
ಗಾಳಿಯಲ್ಲಿ ಹಾರದಾಯ್ತೆ
ಬಾಳ ಆಟದಲ್ಲಿ ಸೋತೆ ನಾನು
ದಾರಿ ತಪ್ಪಿ ಅಲೆದೆ ನಾನು
ತನುವು ಒಮ್ಮೆ ಹಾಗೆ ಕರಗಿ
ಬಾರದೆ ಹೃದಯ ಮರುಗಿ
ನೀನು ಇರದ ಲೋಕ ಶೂನ್ಯ
ನಿನ್ನ ನಗುವೇ ಪ್ರೀತಿ ಮಾನ್ಯ
ಬದುಕು ಒಂದೂ ಬರಡು ಭೂಮಿ
ನಾನು ನಿನ್ನ ಹುಚ್ಚು ಪ್ರೇಮಿ
*********ರಚನೆ **********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment