ನಾಗರ ಹಾವು

 



ದಾರಿಯಲ್ಲಿ ನಡೆವಾಗ

ಹುಲ್ಲು ಹಾಸಿನ ಮೇಲೆ

ಹರಡಿ ಬಿದ್ದಿತ್ತು ಹಾವು

ತಡೆಯಲಾರದೇ ಕಾವು


ನೋಡದೆ ನಾ ತುಳಿದೆ

ಬುಸ್ಸುಗೂಟ್ಟಿತ್ತು ಸರ್ಪ

ಹೆಡೆಯಲ್ಲಿ ರೋಷದ ದರ್ಪ

ಕಲಕಿತು ಮನಸ್ಸು

ಬೆದರಿತು ದೇಹ

ಹೆದರಿತು ಜೀವ

ನೋಡಿ ಹೆಡೆಯೆತ್ತಿದ ಹಾವ


ಕೆಣಕಿದೆ ಹಾವ

ಹಾವು ಇಟ್ಟಿತ್ತು ದ್ವೇಷ

ವಿಧಿಯಿಲ್ಲದೇ ಹಾವ

ಸಾಹಿಸುವ ರೋಷ


ಬಿಟ್ಟರೆ ನಾ ಕೆಟ್ಟೆ

ದೊಣ್ಣೆಯಲ್ಲಿ ಬಡಿದೀಟ್ಟೆ 

ಬೆಂಕಿಯಲ್ಲಿ ಸುಟ್ಟೆ

ದೇವರ ಬಳಿ ಬಂದು

ಎಳ್ಳು ದೀಪ ಹಚ್ಚಿ ಬಿಟ್ಟೆ


ಮಾಡಿದೆ ನಾ ಪಾಪ

ತಡೆದು ಬಿಡು ಹಾವಿನ ಶಾಪ

ಇದು ಯಾವ ಜನ್ಮದ ತಾಪ

ಮನದಿ ಮೂಡಿದೆ ರೂಪ

ದೇವರ ಬೇಡಿದೆ

ಪಾಪ ಪ್ರಜ್ಞೆಯು ಕಾಡಿದೆ

ತಿಳಿಯದೆ ನಡೆದ ಘಟನೆ

ಮನಸ್ಸನು ಹಿಂಡಿದೆ


*********ರಚನೆ *******

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಪ್ರೇಮೋತ್ಸವ

ಹೆತ್ತು ಹೊತ್ತ ತಾಯಿ