ಬಾಳು ಚದುರಂಗ

 


ನಿನ್ನ ಎದೆಯ ಗೂಡಿನಲಿ

ನನಗೊಂದುಜಾಗ ಕೊಡುವೆಯ

ನನ ಕನಸ ಸವಿ ಪ್ರೀತಿಗೆ

ಮುದ್ದಾದ ಹೆಸರನಿಡುವೆಯ

ನನ್ನ ಒಲವಿಗೆ ನಿನ್ನ ಸವಿ

ಮನಸು ನೀಡುವೆಯ


ಯಾರನು ಬಯಸದ ಮನಸ್ಸು

ಏಕೋ ನೀನೇ ಒಲವು ಎಂದಿದೆ

ನಿನ್ನ ಒಲವಿಗಾಗಿ ಕಾದು ಕುಂತಿದೆ

ಹೇಳು ನೀ ನನ್ನವನು ಎಂದು ಕೂಗಿ ಕೇಳಿದೆ


ಸಮಯದಿ ಜಾರದ ಮುದ್ದು ನೀನು

ರವಿವರ್ಮನ ಕುಂಚದ ಅರಗಿಣಿ ನೀನು

ಯಾರು ಅಳಿಸದ ರಂಗೋಲಿ ನೀನು

ನಿನ್ನ ನುಡಿಗಾಗಿ ಕಾದಿರುವ ಮುಖ ಪ್ರೇಮಿ ನಾನು


ಬಾಳು ಎಂಬ ಚದುರಂಗದಾಠದಿ

ಮೆರೆವ ರಾಣಿ ನೀನು

ನಿನ್ನ ಪ್ರೀತಿ ಅಂಬಾರಿಲಿ

ಮೆರೆಸೋ ರಾಜ ನಾನು

ಬ್ರಹ್ಮ ಆಡಿದ ಆಟವೆ

 ಅಂತ್ಯ ಕೊನೆಗೆ ಇಲ್ಲಿ

ಈ ಸಾಮ್ರಾಜ್ಯದಿ ಬಾಳೋಣ

ನಮ್ಮ ಪ್ರೀತಿ ಚೆಲ್ಲಿ 

ನಿನ್ನ ಗೆಲುವ ನೋಡುವ

ಹುಚ್ಚು ಪ್ರೇಮಿ ಇಲ್ಲಿ


*********ರಚನೆ **********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20