ಒಲವಿನ ಮಿಡಿತ




ಕನಸಲು ಕಾಣದ ಕವಿತೆ ನೀನು

ನನ್ನ ಎದೆಯ ಬಡಿತವೇ ನೀನು

ಕಣ್ಣಿಲಿ ಕಂಡ ಚಿತ್ರವೇ ನೀನು

ಆಕಾಶದಿ ಮಿನುಗುವ ನಕ್ಷತ್ರವೆನು

ನನ್ನ ಒಲವಿನ ಮಿಡಿತವೇ ನೀನು 


ಕಾಣದೆ ನಿನ್ನ ಮನಸ್ಸು ನೊಂದಿದೆ

ಹೃದಯದ ಬಡಿತ ನಿನ್ನನೇ ಕೂಗಿದೆ

ವಸಂತ ಮಾಸದಿ ಚಿಗುರೆಲೇ ಕರೆದಿದೆ

ಹರಿಯುವ ನದಿಯು ನೀ ನನ್ನ ವಳು ಎಂದಿದೆ


ಯಾರಿಗೂ ಸಿಗದ ಮಾಯೆಯೇ ನೀನು

ಕನಸಲಿ ಕಂಡ ಅಪ್ಸರೆಯೇನು

ಒಲವಿನ ಸೆಳೆತಕೆ ಸಿಕ್ಕ ನಾನು

ನಿನ್ನನ್ನು ಬಯಸಿ ಅಲೆದಾಡಿಹೆನು


ಪ್ರೀತಿಯ ಸಮುದ್ರದಿ ತೇಲೋ ದೋಣಿ

ಆಕಾಶಕೆ ಹಾಕಲು ಹೊರಟೆ ಏಣಿ

ಸಿಗುವುದೇ ನನ್ನಗೆ ನಿಮ್ಮನೆ ಓಣಿ

ನೀನೇ ನನ್ನ ಮನಸ್ಸಿನ ರಾಣಿ



**********ರಚನೆ *********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ನೋವು ತುಂಬಿ

ಹಣತೆ ಆಳುತಿದೆ

Author biography of Chandrashekhar Channapura Halappa