ಮದುವೆ ಮುಂಚೆ ಇಂಚೆ
ಮದುವೆಯ ಮುಂಚೆ ನಾನು ಒಂಟಿ
ಬಯಸಿತು ಮನವು ಏಕೋ ಜಂಟಿ
ಸಿಕ್ಕಳು ನನಗೆ ಒಬ್ಬಳು ತುಂಟಿ
ನೋಡಲು ಇವಳು ಗೋರಂಟಿ
ಸಾಗಿತು ಜೀವನ ನಗುವಿನಲಿ
ಮಾಗಿತು ಮೈಮನ ಉಲ್ಲಾಸದಲ್ಲಿ
ಹಾರಿತು ಮನಸ್ಸು ಆಕಾಶದಲ್ಲಿ
ತೆಲಿತು ಜೀವನ ಸಮುದ್ರದಲ್ಲಿ
ಸಾಗುತ ಸಾಗುತ ಏಕೋ ಬೇಸರ
ಮಾತು ಮಾತಿಗೂ ಪ್ರೀತಿಯೇ ಅಪಸ್ವರ
ದಿನವು ಕೂಡ ನೋಡುವೆ ಮುಷ್ಕರ
ಮರೆಯಿತೇ ಕಲಿತ ಸಂಸ್ಕಾರ
ಮದುವೆಯ ನಂತರ ಜೀವನ
ಸಾಗಿದೆ
ಬದುಕಿನಾ ಹೇಳು ಬಿಳು ಕಂಡಿದೆ
ನೋವು ನಲಿವಿನ ಊಟವ ಉಂಡಿದೆ
ಮನಸ್ಸುಗಳು ಪೂರ್ತಿ ಮಾಗಿದೆ
ಹುಟ್ಟಿದ ಮಕ್ಕಳು ಬೆಳೆದು ನಿಂತರು
ಮಾಡಿದ ಅಸ್ತಿಗೆ ಜಗಳಕೆ ಕುಂತರು
ಯೋಚನೆ ಮನದಲಿ ಸುಮ್ಮನೆ ನಿಂತರು
ಯಾರಿಗೆ ಹೇಳಲಿ ಮನದ ಕೆಸರು
ಕಾಲವ ಕಳೆಯುತ ಜೀವನ ದುಡುತ
ದೇವರ ಬೇಡುತ ಮನದಲಿ ಮರುಗುತಾ
ಹುಟ್ಟು ಸಾಕು ಜೀವನ ಸಾಕು
ಮಾನವನ ಜೀವನ ಮತ್ತೆ ಬೇಕು
ಕಾಣದ ಲೋಕ ಕೈಬಿಸಿ ಕರೆದಿದೆ
ಸ್ವರ್ಗದ ಬಾಗಿಲು ತೆರೆದಿದೆ
ಮಸಣದ ಹೂವು ನಗುತಾ ಕೇಳಿದೆ
ಬರೆದ ವಿಧಿಯೂ ನೀ ಮುಡಿ ಎಂದಿದೆ
********ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment