ಏ ನೀನು ಕುಡುಕ
🌹🌹ಏ ನೀನು ಕುಡುಕ 🌹🌹
ಕುಡುಕ ಕುಡುಕ ಏನ ಬೇಡ
ಕುಡುಕನ ನಡೆಯ ಜರಿ ಬೇಡ
ಮತ್ತಿನಲಿ ಮಾತಾಡುವ
ಸಿಟ್ಟಿನಲ್ಲಿ ಕೂಗಡುವ
ರೂಚ್ಚಿಗೆದ್ದು ರೇಗಾಡುವ
ಮನಸಲಿ ಇರುವ ನೋವ
ಬಿಚ್ಚಿ ಬಿಚ್ಚಿ ಹೊರಹಾಕುವ
ನೋವುಗಳು ನೂರೆಂಟು
ಬೆಳೆದ ಪರಿ ನೋವುಂಟು
ಅಳಿಸದ ಯಾತನೆ ಮನೆ ಮಾಡಿದೆ
ಕಂಡ ಕನಸು ನೂರೆಂಟಿದೆ
ಕನಸಿಗಾಗಿ ನಾ ಕುಡಿದೆ
ಜೀವನದಲ್ಲಿ ಯಾವುದು ನೆರವೇರದೆ
ನೋವು ಮನಸಲ್ಲಿ ನನ್ನ ಕಾಡಿದೆ
ಕುಡುಕರಲಿ ನೂರೆಂಟು ವಿಧ
ನೋವಿಗಾಗಿ ಕೂಡಿವರು ಸದಾ
ಕುಡಿದು ಕುಡಿದು ಏರಿದೆ ಮದ
ನಿಮಗಗಾಗಿ ಏಳುತಿರುವೆ ಪದ
ತಟ್ಟುವೆನು ಮನೆಯ ಕದ
ಏರಿದಾಗ ನಶೆಯ ಅದ
ನೋವಿಗಾಗಿ ಕೂಡಿವರು
ನಶೆಯಿಂದಲೇ ಅಲೆವರು
ಜೀವನವ ಮರೆವರು
ಮರೆತು ಮಾತಾಡುವರು ಯಾರು ನನ್ನವರು
ಯಾರಿಗಾಗಿ ನಾನು ಕುಡಿವುದು
ಕುಡಿದು ದೇಶಕಾಗಿ ದುಡಿವುದು
ನನ್ನ ನಾ ಕುಡಿದು ಮರೆವುದು
ಕುಡಿದ ಅಮಲಿನಲಿ ಆಕಾಶದಿ ಹಕ್ಕಿಯಂತೆ ಹಾರುವುದು
ಜಾರಿಬಿದ್ದು ನಡು ದಾರಿಯಲ್ಲಿ ಮಲಗುವುದು
ಕೂಡಿದು ಮಾಡುವೇನು ಬೋದನೆ
ಯಾರು ಕೇಳಬೇಕು ಇವರ ಮಾತಾನೇ
ನೋಡಿ ನಗುವರು ಇವನ ಸುಮ್ಮನ್ನೆ
ಕೊಡಬೇಡ ನೀನು ರೋದನೆ
ಏ ಕುಡುಕ ಕುಡಿದು ಮಲಗು ನೀ ತಣ್ಣನೆ
ನಿನ್ನ ನಂಬಿದವರಿಗೆ ತಪ್ಪುವುದಿಲ್ಲ ವೇದನೆ
ಕುಡುಕರಿಗಾಗಿ ಬರೆದೆ ಕವನ ಹಾಗೆ ಮೆತ್ತನೆ
ಬೈ ಬೇಡಿ ನನ್ನ ಓದಿ ನನ್ನ ಕವನವನೇ
*************ರಚನೆ **************
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment