ಶಿವ ಶಿವ

 


ಕನಸಿನಲ್ಲಿ ಶಿವನ ಕಂಡೆ

 ಇಡಿದ ಡಮಾರುಗವ ಕಂಡೆ

ಮುಡಿಯಲ್ಲಿ ಚಂದಿರ

ನೋಡಲೆಷ್ಟು ಸುಂದರ

ನೀನೇ ತಾನೇ ಪರಶಿವ 


ಹರಿವ ನೀರು ನೆತ್ತಿಯಲ್ಲಿ 

ಜಾರಿದಾಗೆ ಗಂಗೆಯೂ

ತೆರೆದ ಮನದ ತುಂಗೆಯೂ

ಕೈಯಲ್ಲಿ ಹಿಡಿದ ತ್ರಿಶುಲಾ

ನೀನೇ ತಾನೇ ಶಿವ ಶಿವ


ಕೊರಳಿನಲ್ಲಿ ಸರ್ಪ ಸುತ್ತಿ

ವಿಷದ ಹಾಲ ಹಲವಾ

ಕುಡಿದ ನೀನೇ ವಿಷ ಕಂಠ

ಧರೆಗೆ ಇಳಿದ  ಶ್ರೀ ಕಂಠ


ಮೂರು ಕಣ್ಣು ಏಕೆ ನಿನಗೇ

ಮುಕ್ಕೋಟಿ ಹೆಸರು ನಿನಗೆ

ಸಿಟ್ಟಿನಲ್ಲಿ ಒಮ್ಮೆ ಸುಟ್ಟರೆ

ಬುಮಂಡಲವೇ ಅಗ್ನಿ ದರೆ

ಏಳುವೆ ನಾನು ಶಿವ ಶಿವ

ಕಾಪಾಡು ನನ್ನ ಪರಶಿವ 


ಪಾರ್ವತಿಯ ಪಕ್ಕದಲ್ಲಿ

ನೀನು ಕುಂತೆ ಸ್ವರ್ಗದಲ್ಲಿ

ಸೊಂಡಿಲ ಗಣಪ ಕಂಡ

ಷಣ್ಮುಗಾ ಊರ ಸುತ್ತಿ ಬಂದ

ನೀನೇ ತಾನೇ ಮಂಜುನಾಥ

ಕಾಶಿಯಲ್ಲಿ  ವಿಶ್ವನಾಥ

ಬಜಿಸುವೆವು ನಿನ್ನ ಕೇದಾರನಾಥ

ಜೈ ಬಮ್ ಬಮ್ ಬೋಲೇನಾಥ 


ನಿನ್ನ ಹೆಸರು ಸಿದ್ದಲಿಂಗ

ಪೂಜಿಸುವರು ಇಷ್ಟಲಿಂಗ

ಎಲ್ಲಾ ಕೊಡುವ ದೇವರೇ

ಕೊಡು ನೀನು ಸುಖಧರೆ

ನೀನೇ ತಾನೇ ಬ್ರಹ್ಮ ಲಿಂಗ

ನನ್ನ ಕೊರಳ ಆತ್ಮಲಿಂಗ

ಹರ ಹರ ಮಹಾದೇವ

 ಬಜಿಸುವೆವು ನಿನ್ನ ಶಿವ ಶಿವ


**********ರಚನೆ ********

ಡಾ. ಚಂದ್ರಶೇಖರ. ಸಿ. ಹೆಚ್

Comments

Popular posts from this blog

ಭಾವಗೀತೆ -51

ಭಾವ ಗೀತೆ-1

ಭಾವ ಗೀತೆ- 20