ಓರೆ ನೋಟ
ಓರೆಗಣ್ಣ ನೋಟ
ಕಾಡಿತೇಕೆ ನನ್ನನ್ನೇ
ಮನಸ್ಸು ಬಂದು
ಏಕೋ ಕೂಗಿತೇಕೆ ಮೆಲ್ಲನ್ನೇ
ಆಸೆ ನೂರು ಹಾಗೆ
ಬಯಸಿತು ನಿನ್ನನ್ನೇ
ಸನಿಹ ನೀ ಬರಲು
ನೋಟ ಚುಚ್ಚಿತು ತಣ್ಣನ್ನೇ
ಮಿಡಿವ ಹೃದಯ
ಕನಸ್ಸು ಕಂಡಿದೆ
ಒಲವ ಬಯಕೆ
ನೂರು ಕಥೆಯ ಹೇಳಿದೆ
ನಿನಗಾಗಿ ಪ್ರೀತಿ ಮೋಹ
ನೀನೇ ನನ್ನ ಒಲವ ದಾಹ
ಕಣ್ಣ ಮುಂದೆ ನೀ ಬಂದು
ಹೇಳು ಒಮ್ಮೆ ನನ್ನವನ್ನೆಂದು
ಕೊಡುವೆ ನಾ ನನ್ನೇ
ಮರೆತ್ತೋಯ್ತು ನೆನ್ನೆ
ಪ್ರೀತಿ ಬೆಸುಗೆ ನೆನೆದು ತನ್ನೆ
ನೀ ನನ್ನ ಮಧುರ ಸೊನ್ನೆ
**********ರಚನೆ ***********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment