ಯುದ್ಧ ಯುದ್ಧ
ಯುದ್ಧ ಯುದ್ಧ
ಗೆದ್ದ ಗೆದ್ದ
ದೇಶ ದೇಶಗಳ
ನಡುವೆ ಯುದ್ಧ
ಎತಕಾಗಿ ರಣರಂಗ
ನಡೆಯುತ್ತಿದೆ ಚದುರಂಗ
ಗುಂಡು ಕ್ಷಿಪಣಿಗಳ
ನಡುವೆ ಕಾಳಗ
ಅಕ್ರಮೀಸಲು ಹೊರಟು
ನರಮೇದವು ನಡೆಯುತ್ತಿದೆ
ಸೈನಿಕರ ಹತ್ಯೆ ಹಾಗುತಿದೆ
ವಿದೇಶ ಜನರ ತೆರವು
ಕಾರ್ಯ ನಡೆಯುತ್ತಿದೆ
ಯಾರು ಗೆದ್ದರೆ ಏನು
ಯಾರು ಸೋತರೆ ಏನು
ಹೋದ ಜೀವಕೆ ಬೆಲೆ ಎಲ್ಲಿ
ಮಾನವೀಯತೆಯ ನೆಲೆ ಎಲ್ಲಿ
ಏತಕಾಗಿ ಈ ಯುದ್ಧ
ಉಕ್ರೈನ್ ಗೆಲ್ಲಲು
ರಷ್ಯಾ ಶತ ಸಿದ್ದ
ನಾಟೊ ಪಡೆಯ
ಮುಸಿಕಿನ ಯುದ್ಧ
ದೇಶಗಳು ಉಕ್ರೈನ್
ಬೆಂಬಲಿಸಿರಲು
ರಷ್ಯಾ ನಿಲ್ಲಿಸಿತೇ ಕಾಳಗ
ಏತಕಾಗಿ ಯುದ್ಧದ ಒಲಗ
ಹುಂಬ ರಾಜಕಾರಣಿಗಳ
ಜಂಬ ಜಗಳಾಕೆ
ಮುಗ್ದ ಜೀವಗಳ ಬಲಿ ಸರಿಯೇ
ಯಾರು ಏಳ ಬೇಕು ಬುದ್ದಿ
ಯುದ್ಧ ಬೇಡ ಎಂದು ತಿದ್ದಿ
ನೆಲವನು ರಕ್ತದಲ್ಲಿ ಎದ್ದಿ
ಮಾಡುವರು ಮಸಣದಿ ಶುದ್ದಿ
ದೇಶ ಕಾಣುತಿದೆ ಘೋರಿ
ರಸ್ತೆ ರಸ್ತೆಗಳು ಕಟ್ಟಡಗಳು
ಹೊತ್ತಿ ಹುರಿದ ಕಾರುಗಳು ಹೇಳಿವೆ
ಕ್ಷಿಪಣಿಗಳು ಬಾಂಬ್ಗಳು ಹಾಕಿದ ಚೂರಿ
ಮೂರನೇ ಮಹಾಯುದ್ಧ
ಶುರುವಾಗುವುದೇ
ಅಣುಬಾಂಬ್ಗಳ ಅಟ್ಟಹಾಸ
ಮೇರುವುದೇ
ಮತ್ತೊಮೆ ನರಕ ಸದೃಷವಾಗುವುದೇ
ನೆಲೆಸಲಿ ಬೇಗ ಶಾಂತಿ
ಮುಗಿಯಲಿ ಯುದ್ಧ ಭೀತಿ
ಬೆಳಗಲಿ ಹಸಿರು ಕ್ರಾಂತಿ
ಕಿತ್ತೋಗಲಿ ಮನಸುಗಳ ಬ್ರಾಂತಿ
ಪಟಿಸಲಿ ಓಂ ಶಾಂತಿ ಶಾಂತಿ
*******ರಚನೆ *********
ಡಾ. ಚಂದ್ರಶೇಖರ. ಸಿ. ಹೆಚ್
Comments
Post a Comment